ಕಾಸರಗೋಡು, ಜ 04 (DaijiworldaNews/HR): ವಿವಾಹವಾಗುವ ಭರವಸೆ ನೀಡಿ 25 ರ ಹರೆಯದ ಯುವತಿಗೆ ವಂಚಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗ್ರಾಮ ಪಂಚಾಯತ್ ನೌಕರನೋರ್ವನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಕುಂಬಳೆ ಗ್ರಾಮ ಪಂಚಾಯತ್ನ ನೌಕರ ಮೀಯಪದವಿನ ಅಭಿಜಿತ್ (28) ಎಂದು ಗುರುತಿಸಲಾಗಿದೆ.
ಕುಂಬಳೆ ಪೊಲೀಸ್ ಠಾಣಾ ವ್ಯಾಪ್ತಿಯ ಯುವತಿ ದೂರಿನಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಈತನನ್ನು ಬಂಧಿಸಿದ್ದಾರೆ.
ಯುವತಿಯ ತಾಯಿಗೆ ಸರಕಾರ ಮೊಂಜೂರು ಗೊಳಿಸಿದ ಮನೆಗಾಗಿ ಯುವತಿ ಅಭಿಜಿತ್ ನನ್ನು ಸಂಪರ್ಕಿಸಿದ್ದಳು. ಬಳಿಕ ನಿರಂತರವಾಗಿ ಮೊಬೈಲ್ ಮೂಲಕ ಯುವತಿಗೆ ಕರೆ ಮಾಡುತ್ತಿದ್ದ ಈತ ವಿವಾಹ ವಾಗುವ ಭರವಸೆ ನೀಡಿದ್ದನು ಹಾಗೂ ಯುವತಿಯ ಮನೆಗೆ ಬಂದು ಲೈಂಗಿಕ ದೌರ್ಜನ್ಯ ನಡೆಸಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ.