ಉಡುಪಿ, ಜ. ೦3 (DaijiworldNews/SM): ಗಂಗೊಳ್ಳಿ ಠಾಣಾ ವ್ಯಾಪ್ತಿಯಲ್ಲಿ ಡಿಸೇಂಬರ್ 26ರಂದು ಮೊಹಮ್ಮದ್ ಇಬ್ರಾಹಿಂ ಮೇಲೆ ಅಕ್ರಮವಾಗಿ ದನ ಕಳ್ಳತನ ಮಾಡಿ ವಧೆ ಮಾಡುತ್ತಿದ್ದಾರೆ ಎಂದು ಸುಳ್ಳು ಆರೋಪದಡಿ ಕುಂದಾಪುರ ತ್ರಾಸಿ ಪೊಲೀಸ್ ಠಾಣೆಯ ಎಸ್ ಐ ನಂಜನಾಯ್ಕ ರಿಂದ ನಕಲಿ ಏನ್ ಕೌಂಟರ್ ಗೆ ಪ್ರಯತ್ನ ಮಾಡಲಾಗಿದೆ, ಹಾಗಾಗಿ ಅವರನ್ನು ಕರ್ತವ್ಯದಿಂದ ವಜಾಗೊಳಿಸುವಂತೆ ಎಸ್ ಡಿಪಿಐ ಜಿಲ್ಲಾಧ್ಯಕ್ಷರಾದ ನಜೀರ್ ಅಹ್ಮದ್ ಆಗ್ರಹಿಸಿದರು.
ಅವರು ಇಂದು ಉಡುಪಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ "ಓರ್ವ ಅಮಾಯಕ ವ್ಯಕ್ತಿಯನ್ನು ಹೆಧರಿಸಿ ಈ ಪ್ರಕರಣ ದಾಖಲಿಸಿ ಜೈಲಿಗೆ ಹಾಕಿಸಿದ್ದು ಜಾಮೀನು ನೀಡಲಾಗಿದೆ. ಈ ಮೂಲಕ ಪೊಲೀಸರೇ ಕೋಮುಭಾವನೆಯನ್ನು ಸೃಷ್ಟಿಸುತ್ತಿದ್ದಾರೆ. ಇದರ ಹಿಂದೆ ವ್ಯವಸ್ಥಿತವಾದ ಹುನ್ನಾರ ಅಡಗಿದೆ. ಎಸ್ ಐ ನಂಜನಾಯ್ಕ್ ವರನ್ನು ತಕ್ಷಣ ವಜಾ ಮಾಡಬೇಕು ಎಂದು ಒತ್ತಾಯಿಸಿದರು.