ಮೂಡುಬಿದಿರೆ, ಜ 03 (DaijiworldNews/PY): ವಿಜೇತ ವಿಶೇಷ ಶಾಲೆಯಲ್ಲಿ ನವಚೇತನ ಸೇವಾ ಬಳಗ ತೋಡಾರು ವತಿಯಿಂದ ಹೊಸ ವರ್ಷದ ದಿನದಂದು ಸಂಭ್ರಮ ಕಾರ್ಯಕ್ರಮ ನಡೆಯಿತು.
ನವ ಚೇತನ ಸೇವಾ ಬಳಗದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಎಫ್ಸಿ ನಿರ್ದೇಶಕಿ ಶ್ರೀಮತಿ ಗೀತಾಂಜಲಿ ಸುವರ್ಣ ಅವರು ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಮಂಗಳೂರು ಅಸೋಸಿಯೇಷನ್ ಸೌದಿ ಅರೇಬಿಯಾದ ಅಧ್ಯಕ್ಷ ಸತೀಶ್ ಕುಮಾರ್ ಬಜಾಲ್, ಕ.ರಾಜ್ಯ ದ.ಕನ್ನಡ ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಶಾಂತ್ ಕೋಟ್ಯಾನ್, ಬಿಲ್ಲವ ವಾರಿಯರ್ಸ್ ಮುಖ್ಯಸ್ಥ ಸದಾನಂದ್ ಪೂಜಾರಿ, ಸಮಾಜ ಸೇವಕ ಪ್ರವೀಣ್ ಬಂಗೇರ, ಪುಷ್ಪರಾಜ್, ತೆಲಿಕೆದ ತೆನಾಲಿ ತಂಡದ ಸುನಿಲ್ ನೆಲ್ಲಿಗುಡ್ಡೆ, ಶ್ರೀಮತಿ ರಶ್ಮಿ ಸನಿಲ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಈ ವೇಳೆ ಶಾಲಾ ಸಂಸ್ಥಾಪಕಿ ಡಾ. ಕಾಂತಿ ಹರೀಶ್ ಹಾಗೂ ಭವತಿ ಭಿಕ್ಷಾಂ ದೇಹಿ ಎಂಬ ಕಾರ್ಯಕ್ರಮದ ಮೂಲಕ ಸಮಾಜ ಸೇವೆಗೈದ ನಿಖಿತಾ ಗಾಣಿಗ ಹಾಗೂ ದೀಪಾ ಅವರನ್ನು ಸನ್ಮಾನಿಸಲಾಯಿತು.
ಪ್ರಶಾಂತ್ ಕೋಟ್ಯಾನ್ ಅವರು ಸಂಸ್ಥೆಗೆ ದೇಣಿಗೆ ನೀಡಿ ಸಹಕರಿಸಿದರು.