ವಿಟ್ಲ, ಡಿ 03 (MSP): ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ರಸ್ತೆ ಮಧ್ಯೆಯೇ ಲಾರಿಯೊಂದು ಕೆಟ್ಟು ನಿಂತು ಸಂಚಾರಕ್ಕೆ ಅಡಚಣೆಯಾದ ಘಟನೆ ಮಾಣಿ ಸಮೀಪದ ಹಳಿರದ ಮಾನಸ ಆಯಿಲ್ ಮಿಲ್ ಬಳಿ ಡಿ.03 ರ ಸೋಮವಾರ ಬೆಳಗ್ಗೆ ನಡೆದಿದೆ.
ಮುಂಜಾನೆ ಸುಮಾರು ನಾಲ್ಕು ಗಂಟೆಯ ವೇಳೆ ಲಾರಿಯೊಂದರ ಎಕ್ಸಿಲ್ ತುಂಡಾದ ಪರಿಣಾಮ ಲಾರಿ ಮುಂದಕ್ಕೆ ಹೋಗಲಾಗದೇ ರಸ್ತೆಯಲ್ಲಿಯೇ ಬಾಕಿಯಾಗಿದೆ
ಇದರಿಂದ ರಾಷ್ಟ್ರೀಯ ಹೆದ್ದಾರಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಬಸ್, ಲಾರಿ, ಶಾಲಾ ವಾಹನಗಳು ರಸ್ತೆಯಲ್ಲಿ ಉಳಿದ ಪರಿಣಾಮ ಉದ್ಯೋಗಿಗಳು, ಹಾಗೂ ವಿದ್ಯಾರ್ಥಿಗಳು ಸಂಕಷ್ಟಕ್ಕೊಳಗಾದರು. ಮಾಣಿಯಿಂದ ಸುರಿಕುಮೇರು, ಹಾಗೂ ಬುಡೋಳಿ ವರೆಗೂ ವಾಹನಗಳು ಸಾಲುಗಟ್ಟಿ ನಿಂತಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಬೇಟಿ ನೀಡಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಶ್ರಮಿಸುತ್ತಿದ್ದಾರೆ.