ಮಂಗಳೂರು, ಜ 03 (DaijiworldNews/HR): ಕಾಂಗ್ರೆಸ್ ಪಕ್ಷವು ಸಂಪೂರ್ಣ ಹಿಂದೂ ವಿರೋಧಿ ನೀತಿ ತಳೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.
ರಾಜ್ಯದಲ್ಲಿ ದೇವಸ್ಥಾನಗಳಿಗೆ ಸ್ವಾಯತ್ತತೆ ವಿಚಾರದ ಕುರಿತು ಮಾತನಾಡಿದ ಅವರು, "ಕಾಂಗ್ರೆಸ್ ಪಕ್ಷ ಇದರಲ್ಲೂ ರಾಜಕಾರಣ ಮಾಡುತ್ತಿದ್ದು, ಕಾಂಗ್ರೆಸ್ ಸಂಪೂರ್ಣ ಹಿಂದೂ ವಿರೋಧಿ ನೀತಿ ತಳೆದಿದೆ. ಕಾಂಗ್ರೆಸ್ಗೆ ಹಿಂದೂ ಧರ್ಮದ, ಸಮಾಜದ ಮೇಲೆ ನಂಬಿಕೆಯಿಲ್ಲ. ಬದಲಿಗೆ ಕೇವಲ ಹಿಂದೂಗಳ ಮತಬ್ಯಾಂಕ್ಗೆ ಮಾತ್ರ ಆಸೆ ಪಡುತ್ತಿದೆ" ಎಂದರು.
ಇನ್ನು ಮತಾಂತರ ಕಾಯ್ದೆಗೆ, ಸಿಎಎಗೆ ಕಾಂಗ್ರೆಸ್ ವಿರೋಧ ಮಾಡಿದ್ದು, ಕೇವಲ ಅಲ್ಪಸಂಖ್ಯಾತರ ಮತದ ಆಸೆಯಲ್ಲಿ, ಇಡೀ ಹಿಂದೂ ಸಮಾಜಕ್ಕೆ ದ್ರೋಹವನ್ನು ಬಗೆಯುತ್ತಿದ್ದು, ಹಿಂದೂ ಸಮಾಜವನ್ನು ಒಡೆದು ಹಾಕುವಂತ ಕೆಲಸ ಮಾಡಿದೆ" ಎಂದು ವಾಗ್ದಾಳಿ ನಡೆಸಿದ್ದಾರೆ.
"ಕಾಂಗ್ರೆಸ್ ಪಕ್ಷಕ್ಕೆ ಹಿಂದೂ ಧರ್ಮದ, ಸಮಾಜದ ಮೇಲೆ ನಂಬಿಕೆಯಿಲ್ಲ. ಕೇವಲ ಹಿಂದೂಗಳ ಮತಬ್ಯಾಂಕ್ ಗೆ ಮಾತ್ರ ಆಸೆ ಪಡುತ್ತಿದೆ. ಸಿಎಂ ಬೊಮ್ಮಾಯಿ ಅವರು ತೆಗೆದುಕೊಂಡ ನಿರ್ಧಾರ ಸರಿಯಿದ್ದು, ಈ ನಿರ್ಧಾರದಿಂದ ಹಿಂದೂ ಸಮಾಜಕ್ಕೂ ಖುಷಿಯಾಗಿದೆ" ಎಂದು ಹೇಳಿದ್ದಾರೆ.