ಉಡುಪಿ, ಜ.03 (DaijiworldNews/PY): ನಗರದಲ್ಲಿ ತಡರಾತ್ರಿವರೆಗೆ ಅತಿ ಕರ್ಕಶವಾಗಿ ಡಿಜೆ ಸೌಂಡ್ ಹಾಕಿಕೊಂಡು ಔತಣಕೂಟ ನಡೆಸುತ್ತಿದ್ದವರ ವಿರುದ್ದ ಪ್ರಕರಣ ದಾಖಲಿಸಲಾಗಿದೆ.
ಉಡುಪಿ ತಾಲೂಕು ಬಡಗುಬೆಟ್ಟು ಗ್ರಾಮದ ಪಣಿಯಾಡಿಯಲ್ಲಿ ಶಿವರಾಮ್ ಶೆಟ್ಟಿಗಾರ್ ಎಂಬವರ ಮನೆಯಲ್ಲಿ ಈ ಕಾರ್ಯಕ್ರಮ ನಡೆಯುತ್ತಿತ್ತು. ಈ ಕುರಿತು ನಗರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ಗೆ ಬಂದ ಮಾಹಿತಿಯ ಮೇರೆಗೆ ಎಸ್ಐ ವಾಸಪ್ಪ ನಾಯ್ಕ ಅವರು ಪ್ರೊಬೆಷನರಿ ಪಿಎಸ್ಐ, ಗಸ್ತು ಸಿಬ್ಬಂದಿ ಹಾಗೂ ಠಾಣಾ ಪ್ರಭಾರ ಅಧಿಕಾರಿಗಳೊಂದಿಗೆ ಹೋಗಿ ಪರಿಶೀಲಿಸಿದಾಗ ಶಿವರಾಮ್ ಶೆಟ್ಟಿಗಾರ್ ಮನೆಯಲ್ಲಿ ಅವರ ಪುತ್ರನ ವಿವಾಹ ರಿಸೆಪ್ಷನ್ ಕಾರ್ಯಕ್ರಮ ನಡೆಯುತ್ತಿತ್ತು. ಯಾವುದೇ ಪೂರ್ವಾನುಮತಿ ಇಲ್ಲದೇ, ಸರ್ಕಾರದ ರಾತ್ರಿ ಕರ್ಫ್ಯೂ ಆದೇಶ ಹಾಗೂ ಕೊರೊನಾ ತಡೆ ಮುಂಜಾಗ್ರತಾ ಕ್ರಮಗಳನ್ನುಉಲ್ಲಂಘಿಸಿ ಕಾರ್ಯಕ್ರಮ ನಡೆಸಲಾಗಿತ್ತು.
ಸ್ಥಳದಿಂದ ಪೊಲೀಸರು ಎರಡು ಡಿಜೆ ಸೌಂಡ್ ಬಾಕ್ಸ್ಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಪ್ರಕಣ ದಾಖಲಿಸಿಕೊಂಡಿದ್ದಾರೆ.