ಮಂಗಳೂರು, ಜ.02 (DaijiworldNews/HR): ಕೊಣಾಜೆ ಮಂಗಳೂರು ವಿಶ್ವವಿದ್ಯಾನಿಲಯ ಬಳಿ ಒಣ ಹುಲ್ಲಿಗೆ ಬೆಂಕಿ ಬಿದ್ದಿರುವ ಘಟನೆ ನಡೆದಿದೆ.
ವಿ.ವಿ ಕ್ಯಾಂಪಸ್ನಿಂದ ಕೊಣಾಜೆ ಪೊಲೀಸ್ ಠಾಣೆವರೆಗೂ ಬೆಂಕಿ ವ್ಯಾಪಿಸಿದ್ದು, ಮಂಗಳೂರು ಅಗ್ನಿಶಾಮಕ ದಳದವರಿಂದ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದಾರೆ.
ಇನ್ನು ವಿ.ವಿ ಕ್ಯಾಂಪಸ್ಸಿನಾದ್ಯಂತ ಒಣಹುಲ್ಲು ಬೆಳೆದಿದ್ದು, ಪ್ರತಿವರ್ಷವೂ ಒಣಹುಲ್ಲಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚುತ್ತಿದ್ದಾರೆ ಎನ್ನಲಾಗಿದೆ.