ಮಂಗಳೂರು, ಜ.02 (DaijiworldNews/HR): ಆಡಿನ ಮರಿಯೊಂದನ್ನು ರಕ್ಷಿಸಲು ಹೋಗಿ ಯುವಕನೋರ್ವ ತನ್ನ ಎರಡು ಕಾಲುಗಳನ್ನು ಕಳೆದುಕೊಂಡು ಚಿಕಿತ್ಸೆ ಪಡೆಯುತ್ತಿದ್ದ ಯುವಕ ಮೃತಪಟ್ಟಿರುವ ಘಟನೆ ಜೋಕಟ್ಟೆಯಲ್ಲಿ ನಡೆದಿದೆ.
ಮೃತಪಟ್ಟ ಯುವಕನನ್ನು ಚೇತನ್(21) ಎಂದು ಗುರುತಿಸಲಾಗಿದೆ.
ಆಡಿನ ಮರಿಯೊಂದು ರೈಲು ಹಳಿಯುದ್ದಕ್ಕೂ ಓಡಾಡಿಕೊಂಡಿದ್ದನ್ನು ಕಂಡ ಚೇತನ್ ಆಡು ಮರಿಯ ರಕ್ಷಣೆಗೆ ಮುಂದಾಗಿದ್ದಾನೆ. ಆಡು ಮರಿಯನ್ನು ಹಳಿಯಿಂದ ಮೇಲೆತ್ತಿ ರಕ್ಷಿಸುವ ವೇಳೆ ರೈಲು ಬಂದು ಅಪ್ಪಳಿಸಿದ್ದು, ಚೇತನ್ ಕಾಲಿನ ಮೇಲೆಯೇ ರೈಲು ಹರಿದು ಹೋಗಿದೆ.
ಗಂಭೀರವಾಗಿ ಗಾಯಗೊಂಡಿದ್ದ ಚೇತನ್ ಅವರನ್ನು ಮಂಗಳೂರಿನ ಎಜೆ ಆಸ್ವತ್ರೆಗೆ ದಾಖಲಿಸಲಾಗಿದ್ದು, ಒಂದುವರೆ ತಿಂಗಳಿದ್ದ ಚೇತನ್ ಅವರು ಉಳಿಸುವುದಕ್ಕಾಗಿ ಅವರ ಸ್ನೇಹಿತರು ಬೀದಿ ಬೀದಿಯಲ್ಲಿ ಹಣ ಸಂಗ್ರಹಿಸಿ ಆಸ್ಪತ್ರೆಯ ಖರ್ಚಿಗೆ ಸಹಾಯ ಮಾಡಿದ್ದು, ಸ್ವಲ್ಪ ಚೇತರಿಸಿಕೊಂಡ ಚೇತನ್ ಅವರನ್ನು ಡಿಸ್ಚಾರ್ಜ್ ಮಾಡಿ ಮನೆಗೆ ಕರೆತಂದಿದ್ದರು. ಆದರೆ ಮಾನಸಿಕವಾಗಿ ಕುಗ್ಗಿದ ಚೇತನ್ ಊಟ ಸರಿ ಮಾಡದೆ ಮತ್ತೆ ಆಸ್ವತ್ರೆಗಿ ಇದೀಗ ಇಹಲೋಹ ತ್ಯಜಿಸಿದ್ದಾರೆ.
ಇನ್ನು ಚೇತನ್ ಅವರು ಯಾರ ಮನಸ್ಸಿಗೂ ನೋವು ಕೊಡದೆ ತಾನು ಕಷ್ಟಪಟ್ಟು ದುಡಿದು ಇನ್ನೊಬ್ಬರ ಕಷ್ಟಗಳಿಗೂ ಸ್ವಂಧಿಸುವ ವ್ಯಕ್ತಿಯಾಗಿದ್ದರು ಎಂದು ಅವರ ಸ್ನೇಹಿತರು ಹೇಳಿದ್ದಾರೆ.