ಕೋಟ, ಜ.02 (DaijiworldNews/HR): ಕೋಟತಟ್ಟು ಗ್ರಾಮದ ಕೊರಗ ಸಮುದಾಯದ ಮೇಲೆ ಪೋಲಿಸ್ ದೌರ್ಜನ್ಯದ ವಿರುದ್ಧ ಕೊರಗ ಸಮುದಾಯದ ಕುಟುಂಬಿಕರು ಕೋಟದ ಅಮೃತೇಶ್ವರಿ ದೇವಿಗೆ ಮೊರೆಇಟ್ಟ ಘಟನೆ ಶನಿವಾರ ನಡೆಯಿತು.
ಈ ಸಂದರ್ಭದಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ದೇವಳದ ಹೊರಭಾಗದಲ್ಲಿ ಕುಟುಂಬ ಸಹಿತ ತೆಂಗಿನ ಕಾಯಿ ಒಡೆದು ತಮ್ಮ ನೋವಿಗೆ ಕಾರಣಿಕರ್ತರಾದ ಯಾರೇ ಇರಬಹುದು ಅಂತವರ ವಿರುದ್ಧ ತಾಯಿ ನೋಡಿಕೊಳ್ಳಲಿ
ನಾವು ಅನ್ಯಾಯ ಮಾಡಿ ಬದುಕಿದವರಲ್ಲ ನಮ್ಮ ಕಾರ್ಯಕ್ರಮ ವಸ್ತುನಿಷ್ಟೆಯಾಗಿ ನಡೆಯುವ ಸಂದರ್ಭದಲ್ಲಿ ನಮ್ಮ ಮೇಲೆ ಏಕಾಏಕಿ ಹಲ್ಲೆ ಮಾಡಿ ಇಡೀ ಕುಟುಂಬ ಭಯದಲ್ಲಿ ಬದುಕುವಂತೆ ಮಾಡಿದ್ದಾರೆ, ನಮ್ಮನ್ನು ಕಾಯುವ ದೇವರ ಮೊರೆಹೋಗಲು ಹಿರಿಯರು ಸೂಚಿಸಿದ್ದಾರೆ ,ಯಾರನ್ನಾದರೂ ಕಣ್ಣು ಕಟ್ಟಬಹುದು ಆದರೆ ದೇವಿಯ ಕಣ್ಣು ಕಟ್ಡಲು ಸಾಧ್ಯವಿಲ್ಲ ಅಂತಯೇ ನೊಂದ ನಮ್ಮ ಸಮಯದಾಯಕ್ಕೆ ಆ ತಾಯಿ ನ್ಯಾಯ ಒದಗಿಸುತ್ತಾಳೆ ನಂಬಿಕೆ ಇಟ್ಟಿದ್ದೇವೆ ಇಂದಿನಿದಲೇ ನೆಮ್ಮದಿಯ ಜೀವನ ಸಾಗಿಸಲು ತಾಯಿ ಅನುಗ್ರಹಿಸಿದ್ದಾಳೆ ಎಂದು ಕೊರಗ ಸಮಾಜದ ಮುಖಂಡ ಗಣೇಶ್ ಬಾರ್ಕೂರು ಹೇಳಿದರು.
ದೇವಳದ ಭೇಟಿಯ ನೇತ್ರತ್ವವನ್ನು ಸಾಮಾಜಿಕ ಕಾರ್ಯಕರ್ತ ಕೋಟ ದಿನೇಶ ಗಾಣಿಗ ವಹಿಸಿದರು.
ಜೀವನ್ ಮಿತ್ರ ಆಂಬ್ಯುಲೇನ್ಸ್ ಮಾಲಿಕ ನಾಗರಾಜ್ ಪುತ್ರನ್, ನಾಗೇಂದ್ರ ಪುತ್ರನ್, ಕೃಷ್ಣ ಪುತ್ರನ್, ರಾಮ ತೋಳಾರ್, ಭರತ್ ಗಾಣಿಗ ಮತ್ತಿತರರು ಉಪಸ್ಥಿತರಿದ್ದರು.