ಉಡುಪಿ, ಡಿ 03, (MSP): ಶ್ರೀಕೃಷ್ಣ ಮಠದ ಮಧ್ವ ಸರೋವರದಲ್ಲಿ ಡಿ.3ರ ಸೋಮವಾರ ನಸುಕಿನ ಜಾವ 5- 30 ರ ಸುಮಾರಿಗೆ, ಯಾತ್ರಾರ್ಥಿ ಒರ್ವರು ಸ್ನಾನ ಮಾಡುವಾಗ ನೀರಿನಲ್ಲಿ ಮುಳುಗಿ ಸಾವನಪ್ಪಿದ ಘಟನೆ ನಡೆದಿದೆ.
ಸ್ಥಳೀಯರು ನೀಡಿದ ಮಾಹಿತಿಯಂತೆ ಅಗ್ನಿಶಾಮಕದಳದ ಸಿಬ್ಭಂದಿಗಳು ಸ್ಥಳಕ್ಕೆ ಧಾವಿಸಿ ಸರೋವರದ ಆಳ ಸೇರಿದ ವ್ಯಕ್ತಿಯನ್ನು ದೋಣಿ ಮೂಲಕ ಸಂಚರಿಸಿ, ಪಾತಳಗರಡಿ ಸಾಧನದ ಮೂಲಕ ಹುಡುಕಾಟ ನಡೆಸಿದರೂ ಪ್ರಯತ್ನ ವಿಫಲಗೊಂಡಿತು.
ಕೊನೆಗೆ ಮುಳುಗು ತಜ್ಞ ಅರುಣ ಕುಮಾರ್ ದೆಂದೂರುಕಟ್ಟೆ ಅವರು, ಸರೋವರದ ತಳ ಜಾಲಾಡಿ ವ್ಯಕ್ತಿಯನ್ನು ಮೇಲಿತ್ತಿ ತಂದಿದ್ದಾರೆ. ಸಮಾಜ ಸೇವಕರಾದ ನಿತ್ಯಾನಂದ ಒಳಕಾಡು, ವಿಶು ಶೆಟ್ಟಿ ಅಂಬಲಪಾಡಿ, ತಾರಾನಾಥ್ ಮೇಸ್ತ ಶಿರೂರು, ಅವರು, ಮಠದ ಸಿಬ್ಬಂದಿಗಳಾದ ರಾಜೇಶ್, ರಾಮ ನಾಯ್ಕ್ ಅವರ ಸಹಕಾರದೊಂದಿಗೆ ವ್ಯಕ್ತಿಯನ್ನು ಶಿಘ್ರಗತಿಯಲ್ಲಿ ಜಿಲ್ಲಾಸ್ಪತ್ರೆಗೆ ಸಾಗಿಸಿದ್ದರೆ. ಪರೀಕ್ಷಿಸಿದ ವೈದ್ಯರು ವ್ಯಕ್ತಿ ಮೃತ ಪಟ್ಟಿರುವುದನ್ನು ಧೃಡಿಕರಿಸಿದ್ದಾರೆ. ಶವವನ್ನು ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ರಕ್ಷಿಸಿ ಇಡಲಾಗಿದೆ. ನಗರ ಠಾಣೆಗೆ ಮಾಹಿತಿ ರವಾನೆಯಾಗಿದೆ.
ವ್ಯಕ್ತಿಯ ಹೆಸರು ಆದರ್ಶ್ (39 ವ) ವಿದ್ಯಾನಗರ, 4 ನೇ ಎ ಕ್ರಾಸ್ ಶಿವಮೊಗ್ಗ, ಎಂದು ಹಿಂದಿನ ದಿನ ವಸತಿಗೃಹದಲ್ಲಿ ತಂಗಿದಾಗ ಮೃತ ವ್ಯಕ್ತಿ ವಿಳಾಸ ದಾಖಲಿಸಿದ್ದಾರೆ. ಮೃತನ ವಾರಸುದಾರರು ಜಿಲ್ಲಾಸ್ಪತ್ರೆಯ ನಾಗರಿಕ ಸಹಾಯ ಕೇಂದ್ರ, ಅಥವ ಉಡುಪಿ ನಗರ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.