ಕಾಪು, ಜ. 1 (DaijiworldNews/SM): ರಸ್ತೆ ದಾಟಲು ನಿಂತಿದ್ದ ವ್ಯಕ್ತಿಗೆ ವೇಗಧೂತ ಬಸ್ಸು ಡಿಕ್ಕಿ ಹೊಡೆದ ಪರಿಣಾಮ, ಸ್ಥಳದಲ್ಲಿಯೇ ಮೃತಪಟ್ಟ ಧಾರುಣ ಘಟನೆ ಕಾಪು ಠಾಣಾ ವ್ಯಾಪ್ತಿಯ ಮೂಳೂರಿನಲ್ಲಿ ಶನಿವಾರ ರಾತ್ರಿ ಸಂಭವಿಸಿದೆ.
ಮೃತಪಟ್ಟವರನ್ನು ಮೂಳೂರು ನಿವಾಸಿ ಹರಿಓಂ ಯಾನೆ ರಮೇಶ್ ಜಿರ್ಕೇರಾ ಎಂದು ಗುರುತಿಸಲಾಗಿದೆ. ಅವರು ಮೂಳೂರು ರಾ.ಹೆ. 66ರ ಬಳಿಯ ಸಾಗರ ಹೋಟೆಲ್ ಎದುರು ರಸ್ತೆ ದಾಟಲು ನಿಂತಿದ್ದಾಗ, ಮಂಗಳೂರಿನಿಂದ ಉಡುಪಿಗೆ ತೆರಳುತ್ತಿದ್ದ ವೇಗಧೂತ ಬಸ್ಸು ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ರಮೇಶ್ರವರ ತಲೆ ಜಜ್ಜಿ ಹೋಗಿದ್ದು, ಸ್ಥಳದಲ್ಲೇ ಅವರು ಮೃತಪಟ್ಟಿದ್ದಾರೆ.
ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.