ಕಾಸರಗೋಡು, ಜ.01 (DaijiworldNews/PY): ಜಿಲ್ಲಾ ನೂತನ ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ವೈಬವ್ ಸಕ್ಸೇನಾ ಅವರನ್ನು ನೇಮಿಸಲಾಗಿದೆ.
ಹಾಲಿ ಎಸ್ಪಿ ಪಿ.ಬಿ ರಾಜೀವ್ ಅವರನ್ನು ಕಣ್ಣೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾಯಿಸಲಾಗಿದೆ.
ಸಕ್ಸೇನಾ ಪ್ರಸ್ತುತ ತಿರುವನಂತಪುರ ಸಿಟಿ ಉಪ ಆಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 2016ರ ಐಪಿಎಸ್ ಬ್ಯಾಚ್ನ ಸಕ್ಸೇನಾ ಅವರು ಈ ಹಿಂದೆ ಮಾನಂತವಾಡಿಯಲ್ಲಿ ಎ.ಎಸ್ಪಿಯಾಗಿ ಸೇವೆ ಸಲ್ಲಿಸಿದ್ದರು.