ಕಾರ್ಕಳ, ಜ 01 (DaijiworldNews/MS): ಮರಕತ್ತರಿಸುವ ಕಾರ್ಮಿಕ ನಾಪತ್ತೆಯಾದ ಘಟನೆ ಕುಕ್ಕುಂದೂರುಗ್ರಾಮದ ಜೋಡುರಸ್ತೆಯಲ್ಲಿ ನಡೆದಿದೆ.
ವಾಸುದೇವ ನಾಯಕ್ (56) ನಾಪತ್ತೆಯಾದವರು. ಎಂಬವರು ಅವರ ಪತ್ನಿ ಗೇರು ಬೀಜ ಫ್ಯಾಕ್ಟರಿಗೆ ಕೆಲಸಕ್ಕೆ ಹೋಗಿದ್ದ ಸಮಯದಲ್ಲಿ ಮನೆಗೆ ಬೀಗ ಹಾಕಿ ಮೊಬೈಲ್ ಫೋನ್ ಮತ್ತು ಸ್ಕೂಟರನ್ನು ಮನೆಯಲ್ಲಿಯೇ ಬಿಟ್ಟು ಹೋದವರು ವಾಪಾಸು ಹಿಂತಿರುಗಿಲ್ಲ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.