ಮಂಗಳೂರು, ಡಿ. 31 (DaijiworldNews/SM): ಧಾರ್ಮಿಕ ಕೇಂದ್ರ ಅಪವಿತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸಿದ್ದು, ಈ ಹಿಂದೆ ನಮ್ಮ ಯುವಕರನ್ನು ಹೊಣೆಯಾಗಿಸಿದ್ದಕ್ಕೆ ಪೊಲೀಸ್ ಇಲಾಖೆ ಉತ್ತರಿಸಬೇಕೆಂದು ಪಿಎಫ್ ಐ ಸಂಘಟನೆ ಆಗ್ರಹಿಸಿದೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಪಿಎಫ್ ಐ ಮುಖಂಡರು, ಈ ಹಿಂದೆ ಸಂಘ ಪರಿವಾರಗಳು ನಮ್ಮ ಮೇಲೆ ಆರೋಪಿಸಿದ್ದರು. ಜೋಕಟ್ಟೆಯ ಮುಸ್ಲಿಂ ಯುವಕ ಅನಾರೋಗ್ಯದಿಂದ ಮೃತಪಟ್ಟಿದ್ದ. ಆ ಸಂದರ್ಭದಲ್ಲಿ ದೈವದ ಶಾಪದಿಂದ ಸಾವನ್ನಪ್ಪಿದ್ದ ಎಂದು ಆರೋಪಿಸಲಾಗಿತ್ತು.
ಆದರೆ, ಆ ಬಳಿಕ ಪ್ರಕರಣದ ಸತ್ಯಾಸತ್ಯತೆ ಬಹಿರಂಗಗೊಂಡಿತು. ಅವರನ್ನು ಮಾಧ್ಯಮದ ಮುಂದೆ ಹಾಜರುಪಡಿಸಲಾಗಿತ್ತು. ಈ ಬಗ್ಗೆ ನಾವು ಮನವಿ ಮಾಡಿದ್ದೆವು. ಅಮಾಯಕರನ್ನು ಯಾಕೆ ಹೊಣೆಗೊಳಿಸಿದ್ದೀರಿ? ಇದಕ್ಕೆ ಪೊಲೀಸ್ ಇಲಾಖೆ ಪ್ರತಿಕ್ರಿಯೆ ನೀಡಬೇಕೆಂದು ಆಗ್ರಹಿಸಿದ್ದಾರೆ.