ಕಾರ್ಕಳ, ಡಿ. 31 (DaijiworldNews/HR): ನೆಹರು ಯುವ ಕೇಂದ್ರ ಆಯೋಜಿಸಿದ್ದ ದೇಶ ಭಕ್ತಿ ಮತ್ತು ರಾಷ್ಟ್ರ ನಿರ್ಮಾಣದ ಕುರಿತು ರಾಜ್ಯ ಮಟ್ಟದ ಇಂಗ್ಲಿಷ್ ಭಾಷಣ ಸ್ಪರ್ಧೆಯಲ್ಲಿ ಕಾರ್ಕಳ ಭುವನೇಂದ್ರ ಕಾಲೇಜಿನ ಪ್ರಥಮ ಬಿ.ಕಾಂ ವಿದ್ಯಾರ್ಥಿನಿ ಟಿ ಶರಣ್ಯ ನಾಯಕ್ ಪ್ರಥಮ ಸ್ಥಾನ ಪಡೆದ್ದಿದಾರೆ.
ಪ್ರಶಸ್ತಿಯು ಪ್ರಶಸ್ತಿ ಪತ್ರ ಹಾಗೂ ನಗದು 25 ಸಾವಿರ ರೂ. ಒಳಗೊಂಡಿದೆ.
ಶರಣ್ಯ ನಾಯಕ್ ಅವರು ಜನವರಿಯಲ್ಲಿ ದೆಹಲಿಯಲ್ಲಿ ನಡೆಯುವ ರಾಷ್ಟ್ರ ಮಟ್ಟ ಸ್ಪರ್ಧೆಗೆ ಅರ್ಹತೆ ಪಡೆದು ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ.
ಇನ್ನು ಶರಣ್ಯ ಅವರು ಅನಂತ್ ಶಯನ ನಿವಾಸಿ ಟಿ. ರಾಜಾರಾಮ್ ನಾಯಕ್ ಹಾಗೂ ಟಿ ರಾಜೇಶ್ವರಿ ನಾಯಕ್ ಅವರ ಪುತ್ರಿಯಾಗಿದ್ದಾರೆ.