ಸುರತ್ಕಲ್, ಡಿ.31 (DaijiworldNews/PY): "ಕೊರೊನಾ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಪಣಂಬೂರು, ತಣ್ಣೀರುಬಾವಿ, ಸುರತ್ಕಲ್ ಸೇರಿದಂತೆ ಮಂಗಳೂರಿನ ಪ್ರಮುಖ ಬೀಚ್ಗಳಿಗೆ ಡಿ.31ರ ಶುಕ್ರವಾರದಂದು ಸಂಜೆ 7 ಗಂಟೆಯ ಬಳಿಕ ಹೋಗುವುದು ಹಾಗೂ ಅಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಮಾಡುವುದನ್ನು ನಿಷೇಧಿಸಲಾಗಿದೆ" ಎಂದು ದ.ಕ. ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆ. ವಿ ಹೇಳಿದ್ದಾರೆ.
"ಬೀಚ್ ಸೇರಿದಂತೆ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಹೊಸ ವರ್ಷಾಚರಣೆ ನಡೆಸಬಾರದು" ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ ತಿಳಿಸಿದ್ದಾರೆ.