ಕಾಸರಗೋಡು, ಡಿ.30 (DaijiworldNews/SM): ನಗರದ ಸುಲ್ತಾನ್ ಜ್ಯುವೆಲ್ಲರಿಯಿಂದ 2.88 ಕೋಟಿ ರೂಪಾಯಿ ಮೌಲ್ಯದ ವಜ್ರಾಭರಣ ದೋಚಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯಾಗಿರುವ ಮುಹಮ್ಮದ್ ಫಾರೂಕ್ ನನ್ನು ಬಂಟ್ವಾಳಕ್ಕೆ ಕರೆದೊಯ್ದಿರುವ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ.
ಬಂಟ್ವಾಳ ಬಿ.ಸಿ. ರೋಡ್ ನ ಹಣಕಾಸು ಸಂಸ್ಥೆ ಹಾಗೂ ಸಹಕಾರಿ ಸಂಸ್ಥೆಯಲ್ಲಿ ಅಡವಿಟ್ಟಿದ್ದ ವಜ್ರಾಭರಣವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
22 ಲಕ್ಷ ರೂಪಾಯಿ ಮೌಲ್ಯದ ವಜ್ರಾಭರಣವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. 1.65 ಕೋಟಿ ರೂ. ಮೌಲ್ಯದ ವಜ್ರಾಭರಣವನ್ನು ಈ ಹಿಂದೆ ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಒಟ್ಟು 1.87 ಕೋಟಿ ರೂ ಮೌಲ್ಯದ ವಜ್ರಾಭರಣವನ್ನು ಈಗಾಗಲೇ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.