ಪುತ್ತೂರು, ಡಿ 30 (DaijiworldNews/MS): ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮುಂಭಾಗ ಇರುವ ಕಂಬಳಗದ್ದೆಯಲ್ಲಿರುವ ಬಾವಿಗೆ ವ್ಯಕ್ತಿಯೊಬ್ಬರು ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ಡಿ.30 ರ ಗುರುವಾರ ನಡೆದಿದೆ. ಪುತ್ತೂರು ದರ್ಬೆ ನಿವಾಸಿ, ಇಂಟರ್ ನೆಟ್ ಕೇಬಲ್ ಸಂಸ್ಥೆಯ ಮನೋಹರ್ ಪ್ರಭು (50) ಮೃತಪಟ್ಟವರು.
ಚಪ್ಪಲಿ, ದ್ವಿಚಕ್ರ ವಾಹನ ಬಾವಿ ಬಳಿ ಪತ್ತೆಯಾದ ಹಿನ್ನೆಲೆಯಲ್ಲಿ ಅಗ್ನಿಶಾಮಕ ಪೊಲೀಸರು ಬಾವಿ ಪರಿಶೀಲನೆ ನಡೆಸಿದರು. ಪುತ್ತೂರು ಅಗ್ನಿಶಾಮಕದಳದ ರುಕ್ಮಯ ಗೌಡರವರ ನೇತೃತ್ವದಲ್ಲಿ ಕೃಷ್ಣ ಜಾಲಿಬೇರ, ತೌಸಿಪ್ ಯಾನೆ ಮುಲ್ಲಾ ಅವರು ಗರುಡಪಾತಾಳದ ಮೂಲಕ ಪತ್ತೆಮಾಡಿ ಮೃತದೇಹವನ್ನು ಬಾವಿಯಿಂದ ಮೇಲಕ್ಕೆತ್ತಿದ್ದಾರೆ.
ಮನೋಹರ್ ಪ್ರಭು ಮಾನಸಿಕವಾಗಿ ಮನನೊಂದು ಆತ್ಮಹತ್ಯೆ ನಿಖರ ಕಾರಣ ತಿಳಿದುಬಂದಿಲ್ಲ. ಪತ್ನಿ, ಮತ್ತು ಎರಡು ಮಕ್ಕಳು ಬಂಧುಬಳಗವನ್ನು ಅಗಲಿದ್ದಾರೆ. ಪುತ್ತೂರು ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.