ಬಂಟ್ವಾಳ, ಡಿ 30 (DaijiworldNews/MS): ವಿಟ್ಲ ಪಟ್ಟಣ ಪಂಚಾಯತ್ ನ 18 ಸ್ಥಾನಗಳಿಗೆ ನಡೆದ ಚುನಾವಣಾ ಮತ ಎಣಿಕೆ ಕಾರ್ಯ ಬಿ.ಸಿ.ರೋಡು ಮೊಡಂಕಾಪು ವಿನ ದೀಪಿಕಾ ಪ್ರೌಢಶಾಲೆಯಲ್ಲಿ ನಡೆದಿದ್ದು, 12 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ.
ಉಳಿದಂತೆ ಕಾಂಗ್ರೆಸ್ 5 ಸ್ಥಾನಗಳಲ್ಲಿ ಜಯಗಳಿಸಿದರೆ, ಎಸ್ ಡಿ ಪಿ ಐ ಒಂದು ಸ್ಥಾನ ಗೆಲ್ಲುವುದರ ಮೂಲಕ ವಿಟ್ಲ ಪಟ್ಟಣ ಪಂಚಾಯತ್ ನಲ್ಲಿ ಖಾತೆ ತೆರೆದಿದೆ.
ವಿಟ್ಲ ಪಟ್ಟಣ ಪಂಚಾಯತ್ ನ 1ನೇ ವಾರ್ಡ್ನಲ್ಲಿ ಕಾಂಗ್ರೆಸ್ ವಿ. ಕೆ. ಮಹಮ್ಮದ್ ಅಶ್ರಫ್ 425 ಮತಗಳನ್ನು ಪಡೆದು ಜಯಗಳಿಸಿದರೆ, ಬಿಜೆಪಿ ಕೃಷ್ಣಪ್ಪ ಗೌಡ 388 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ.
2 ನೇ ವಾರ್ಡ್ ನಲ್ಲಿ ಬಿಜೆಪಿಯ ಸಂಗೀತ 316 ಮತ ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ನ ಕಮಲಾಕ್ಷಿ 192, ಎಸ್. ಡಿ. ಪಿ. ಐ. : ಆಯಿಷ ಎನ್. 92 ಮತ ಪಡದು ಸೋಲು ಕಂಡಿದ್ದಾರೆ.
3ನೇ ವಾರ್ಡ್ ನಲ್ಲಿ ಬಿಜೆಪಿಯ ಸಿ. ಎಚ್. ಜಯಂತ 322 ಮತ ಪಡೆದು ಜಯ ಗಳಿಸಿದ್ದಾರೆ. ಕಾಂಗ್ರೆಸ್ ಶ್ರೀನಿವಾಸ ಶೆಟ್ಟಿ 310 ಮತ ಪಡೆದು ಸೋಲು ಕಂಡಿದ್ದಾರೆ.
4ನೇ ವಾರ್ಡ್ ನಲ್ಲಿ ಬಿಜೆಪಿ ರಕ್ಷಿತ 301ಮತ ಗಳಿಸಿ ವಿಜಯಶಾಲಿಯಾಗಿದ್ದಾರೆ. ಕಾಂಗ್ರೆಸ್ ಆಯಿಷಾ 269ಮತ ಪಡೆದು ಸೋಲು ಕಂಡಿದ್ದಾರೆ.
5ನೇ ವಾರ್ಡ್ ನಲ್ಲಿ ಬಿಜೆಪಿ ವಸಂತ ಕೆ. 314 ಮತ ಗಳಿಸಿ ಜಯಗಳಿಸಿದ್ದಾರೆ. ಕಾಂಗ್ರೆಸ್ ವಸಂತಿ 251 ಮತಗಳಿಸಿ ಸೋಲುಂಡಿದ್ದಾರೆ.
6ನೇ ವಾರ್ಡ್ ನಲ್ಲಿ ಬಿಜೆಪಿಯ ವಿಜಯಲಕ್ಷ್ಮಿ 274 ಮತ ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಲೀಲಾವತಿ 226 ಮತ ಪಡೆದು ಸೋಲು ಕಂಡಿದ್ದಾರೆ.
7ನೇ ವಾರ್ಡ್ ನಲ್ಲಿ ಬಿಜೆಪಿ ರವಿಪ್ರಕಾಶ್ ಯಸ್. 439 ಮತಗಳಿಸಿ ವಿಜಯಶಾಲಿಯಾದರು. ಕಾಂಗ್ರೆಸ್ ಶಿವಪ್ರಸಾದ್ ವಿ. 214 ಮತ ಪಡೆದು ಸೋಲು ಕಂಡಿದ್ದಾರೆ.
8ನೇ ವಾರ್ಡ್ ನಲ್ಲಿ ಬಿಜೆಪಿಯ ಸುನೀತಾ 190 ಮತ ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಸುನೀತ ಕೊಟ್ಯಾನ್ 161, ಎಸ್. ಡಿ. ಪಿ. ಐ ರಝೀಯಾ 177 ಮತ ಪಡೆದು ಸೋಲುಕಂಡಿದ್ದಾರೆ.
9ನೇ ವಾರ್ಡ್ ನಲ್ಲಿ ಬಿಜೆಪಿಯ ಎನ್. ಕೃಷ್ಣ 395 ಮತ ಗಳಿಸಿ ವಿಜಯಿಯಾಗಿದ್ದಾರೆ. ಕಾಂಗ್ರೆಸ್ ಶಿವಪ್ರಸಾದ್ 266 ಮತ ಗಳಿಸಿ ಸೋಲು ಕಂಡಿದ್ದಾರೆ.
10ನೇ ವಾರ್ಡ್ ನಲ್ಲಿ ಕಾಂಗ್ರೆಸ್ ಪದ್ಮಿನಿ 377 ಮತಗಳಿಸಿ ವಿಜಯವಾಗಿದ್ದಾರೆ. ಬಿಜೆಪಿ ಸುಮತಿ 214ಮತ ಪಡೆದು ಸೋಲು ಕಂಡಿದ್ದಾರೆ.
11ನೇ ವಾರ್ಡ್ ನಲ್ಲಿ ಬಿಜೆಪಿ ಅರುಣ್ ಎಂ 288 ಮತಗಳನ್ನು ಪಡೆದು ಜಯಗಳಿಸಿದರೆ, ಕಾಂಗ್ರೆಸ್ ರಮಾನಾಥ ವಿ. 213, ಪಕ್ಷೇತರ ಜಾನ್ ಡಿಸೋಜ 15 ಮತ ಪಡೆದು ಸೋಲು ಕಂಡಿದ್ದಾರೆ.
12ನೇ ವಾರ್ಡ್ ನಲ್ಲಿ ಬಿಜೆಪಿ ಹರೀಶ್ ಸಿ. ಎಚ್. 332 ಮತಗಳಿಸಿ ವಿಜಯಶಾಲಿಯಾಗಿದ್ದಾರೆ. ಕಾಂಗ್ರೆಸ್ ಎಂ. ಕೆ. ಮೂಸಾ 161 ಮತ ಗಳಿಸಿ ಸೋಲು ಕಂಡಿದ್ದಾರೆ.
13ನೇ ವಾರ್ಡ್ ನಲ್ಲಿ ಎಸ್.ಡಿ.ಪಿ.ಐ. ಶಾಕೀರ 279 ಮತಗಳಿಸುವ ಮೂಲಕ ಜಯಗಳಿಸಿದ್ದಾರೆ. ಕಾಂಗ್ರೆಸ್ ಅಸ್ಮ ಯು.ಕೆ. 204, ಬಿಜೆಪಿ ಪುಷ್ಪಾ 119 ಮತಗಳಿಸಿ ಸೋಲುಕಂಡಿದ್ದಾರೆ.
14ನೇ ವಾರ್ಡ್ ನಲ್ಲಿ 512 ಮತಚಲಾವಣೆಯಾಗಿದ್ದು, ಬಿಜೆಪಿ ಅಶೋಕ್ ಕುಮಾರ್ ಶೆಟ್ಟಿ 242 ಮತಗಳಿಸಿ ಜಯಗಳಿಸಿದ್ದಾರೆ. ಕಾಂಗ್ರೆಸ್ ಮನೋಹರ ಲ್ಯಾನ್ಸಿ ಡಿ ಸೋಜ 144, ಪಕ್ಷೇತರ ಮೋಹನ್ ಸೇರಾಜೆ 125 ಮತ ಪಡೆದು ಸೋಲು ಕಂಡಿದ್ದಾರೆ.
15ನೇ ವಾರ್ಡ್ ನಲ್ಲಿ ಕಾಂಗ್ರೆಸ್ನ ಲತಾವೇಣಿ 381ಮತ ಗಳಿಸಿ ಜಯಗಳಿಸಿದ್ದಾರೆ. ಬಿಜೆಪಿ ಸಂಧ್ಯಾಗಣೇಶ್ 319 ಪಡೆದು ಸೋಲುಕಂಡಿದ್ದಾರೆ. ನೋಟ 3 ಮತ ಚಲಾವಣೆಯಾಗಿದೆ.
16ನೇ ವಾರ್ಡ್ ನಲ್ಲಿ ಕಾಂಗ್ರೆಸ್ ನ ಡೀಕಯ್ಯ 247 ಮತ ಪಡೆದು ಜಯಗಳಿಸಿದ್ದಾರೆ. ಬಿಜೆಪಿ ಕೃಷ್ಣಪ್ಪ 220ಮತ ಪಡೆದು ಸೋಲು ಕಂಡಿದ್ದಾರೆ.
17ನೇ ವಾರ್ಡ್ ನಲ್ಲಿ ಬಿಜೆಪಿಯ ಕರುಣಾಕರ 415ಮತ ಗಳಿಸಿ ಜಯಗಳಿಸಿದ್ದಾರೆ. ಕಾಂಗ್ರೆಸ್ ಶ್ರೀಚರಣ್ 320 ಮತಪಡೆದು ಸೋಲು ಕಂಡಿದ್ದಾರೆ.
18ನೇ ವಾರ್ಡ್ ನಲ್ಲಿ ಕಾಂಗ್ರೆಸ್ ನ ಅಬ್ದುಲ್ ರಹಿಮನ್ 352 ಜಯಗಳಿಸಿದ್ದಾರೆ. ಬಿಜೆಪಿ ಕೃಷ್ಣಪ್ಪ ಮೂಲ್ಯ 60,ಎಸ್.ಡಿ.ಪಿ.ಐ. ಸಯ್ಯದ್ ಇಳ್ಯಾಸ್ 173 ಮತಪಡೆದು ಸೋಲು ಕಂಡಿದ್ದಾರೆ.