ಮಂಗಳೂರು, ಡಿ 30 (DaijiworldNews/MS): ಇಲ್ಲಿನ ಮಹಾನಗರ ಪಾಲಿಕೆ ವ್ಯಾಪ್ತಿಯ ಜಿ.ಹೆಚ್.ಎಸ್. ಅಡ್ಡ ರಸ್ತೆಯಲ್ಲಿ (ಜುವೆಲ್ಲರಿ ಲೇನ್) ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿರುದರಿಂದ ಆ ರಸ್ತೆಯಲ್ಲಿ ಎಲ್ಲಾ ರೀತಿಯ ವಾಹನಗಳ ಸಂಚಾರ ನಿರ್ಬಂಧಿಸಿ ಪರ್ಯಾಯ ಮಾರ್ಗದ ವ್ಯವಸ್ಥೆ ಕಲ್ಪಿಸಲಾಗಿದೆ.
ಮಂಗಳೂರು ನಗರದ ಸ್ಟೇಟ್ ಬ್ಯಾಂಕಿನಿಂದ ಉರ್ವ ಸ್ಟೋರ್, ಕೋಡಿಕಲ್, ದಂಬೇಲ್, ಕುಂಜತ್ತಬೈಲು ಕಡೆಗೆ ಜಿ.ಎಚ್.ಎಸ್ ರಸ್ತೆ ಮುಖಾಂತರ ಜಿ.ಎಚ್.ಎಸ್ ಅಡ್ಡರಸ್ತೆಯಲ್ಲಿ (ಜ್ಯುವೆಲ್ಲರಿ ಲೇನ್) ಸಂಚರಿಸುವ ಬಸ್ಸುಗಳು ಕಾಮಗಾರಿ ನಡೆಯುವ ವೇಳೆ ಆ ರಸ್ತೆಯಲ್ಲಿ ಸಂಚರಿಸದೇ ಕೆ.ಬಿ.ಕಟ್ಟೆ, ಹಂಪನಕಟ್ಟೆ, ಕೆ.ಎಸ್.ರಾವ್ ರಸ್ತೆ, ನವಭಾರತ್, ಡೊಂಗರಕೇರಿ ಕಟ್ಟೆ, ಡೊಂಗರಕೇರಿ ದೇವಸ್ಥಾನ, ನ್ಯೂಚಿತ್ರಾ ಜಂಕ್ಷನ್ ಮುಖಾಂತರ ಸಂಚರಿಸಬೇಕು.
ಕಾಮಗಾರಿ ನಡೆಯುವ ವೇಳೆ ಬಸ್ಸುಗಳನ್ನು ಹೊರತುಪಡಿಸಿ ಇತರ ಲಘು ವಾಹನಗಳು ಕೆ.ಬಿ.ಕಟ್ಟೆ, ಜಿ.ಹೆಚ್.ಎಸ್.ರಸ್ತೆ, ಶರವು, ದೇವಸ್ಥಾನ, ಕೆ.ಎಸ್.ರಾವ್ ರಸ್ತೆ, ನವಭಾರತ್, ಡೊಂಗರಕೇರಿ ಕಟ್ಟೆ, ಡೊಂಗರಕೇರಿ ದೇವಸ್ಥಾನ, ನ್ಯೂಚಿತ್ರಾ ಜಂಕ್ಷನ್ ಮೂಲಕ ಸಂಚರಿಸಬೇಕು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಅವರು ಮೋಟಾರು ವಾಹನ ಕಾಯ್ದೆ 1988ರ ಕಲಂ 115ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಇದೇ ಡಿ.29ರ ಬುಧವಾರದಿಂದ 2022ರ ಫೆಬ್ರವರಿ 11ರ ವರೆಗೆ 45 ದಿನಗಳ ಕಾಲ ವಾಹನಗಳ ಸಂಚಾರದಲ್ಲಿ ಮಾರ್ಗ ಬದಲಿಸಿರುವ ಕುರಿತು ತಾತ್ಕಾಲಿಕ ಅಧಿಸೂಚನೆ ಹೊರಡಿಸಿದ್ದಾರೆ.