ಕಾರ್ಕಳ, ಡಿ. 29 (DaijiworldNews/HR): ತನ್ನ ಇಬ್ಬರು ಮಕ್ಕಳೊಂದಿಗೆ ಮಹಿಳೆ ನಾಪತ್ತೆಯಾದ ಘಟನೆ ಕಾರ್ಕಳ ತಾಲೂಕಿನ ನಂದಳಿಕೆ ಎಂಬಲ್ಲಿ ನಡೆದಿದೆ.
ರತ್ನ ತಿಪ್ಪೇಶ ವಾಲ್ಮೀಕಿ (32), ಮಕ್ಕಳಾದ ಕೈಲಾಶ್ ಕುಮಾರ್ (10) ಮಗಳು ನಮಿತಾ (5) ಎಂಬವರು ನಾಪತ್ತೆಯಾದವರು.
ನಂದಳಿಕೆ ಗ್ರಾಮದ ವಿಲ್ಡಾ ಬಾಯಿ ರವರ ಬಾಡಿಗೆ ಮನೆಯಲ್ಲಿ ಇವರು ವಾಸವಾಗಿದ್ದರು. ಡಿಸೆಂಬರ್ 24ರ ಸಂಜೆಯಿಂದ ರಾತ್ರಿ 7.30ರ ನಡುವೆ ಈ ಘಟನೆ ನಡೆದಿದೆ.
ಇವರೆಲ್ಲರೂ ಉತ್ತರ ಕನ್ನಡ ಜಿಲ್ಲೆಯಶಿರಸಿ ತಾಲೂಕಿನ ಹಾಲಿ ಗ್ರಾಮದವರಾಗಿದ್ದಾರೆ.
ಈ ಕುರಿತು ರತ್ನ ಅವರ ಪತಿ ತಿಪ್ಪೇಶ್ ಪಕ್ಕೀರಪ್ಪ ಕಾರ್ಕಳ ಗ್ರಾಮಾಂತರ ಠಾಣೆಗೆ ದೂರು ಸಲ್ಲಿಸಿದ್ದಾರೆ.