ಕಾಸರಗೋಡು, ಡಿ. 28 (DaijiworldNews/HR): ಜಿಲ್ಲೆಯಲ್ಲಿ ಮಂಗಳವಾರ 35 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 100 ಮಂದಿ ಗುಣಮುಖರಾಗಿದ್ದಾರೆ.
ಜಿಲ್ಲೆಯಲ್ಲಿ 407 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, 4,351 ಮಂದಿ ನಿಗಾದಲ್ಲಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 803ಕ್ಕೆ ತಲಪಿದೆ.
ಇನ್ನು ಜಿಲ್ಲೆಯಲ್ಲಿ ಇದುವರೆಗೆ 1,43,587 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಪೈಕಿ 1, 41, 921 ಮಂದಿ ಗುಣಮುಖರಾಗಿದ್ದಾರೆ.