ಮಂಗಳೂರು,ಡಿ 02 (MSP):ತೋಟ ಬೆಂಗ್ರೆಯಲ್ಲಿ ನವೆಂಬರ್ 18ರಂದು ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ದೂರು ನೀಡಲು ಬಂದಾಗ ದಾಖಲಿಸದೇ ಕರ್ತವ್ಯಲೋಪ ಎಸಗಿದ್ದ ಆರೋಪ ಎದುರಿಸುತ್ತಿರುವ ಬಂಟ್ವಾಳ ನಗರ ಠಾಣೆಯ ಸಹಾಯಕ ಸಬ್ ಇನ್ಸ್ಪೆಕ್ಟರ್ (ಎಎಸ್ಐ) ರಘುರಾಮ ಹೆಗ್ಡೆ ವಿರುದ್ಧ ಅದೇ ಠಾಣೆಯಲ್ಲಿ(ಬಂಟ್ವಾಳ ಠಾಣೆ)ಯಲ್ಲಿ ಸ್ಬಯಂ ಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಎಸ್ಪಿ ರವಿಕಾಂತೇಗೌಡ ತಿಳಿಸಿದ್ದಾರೆ.
ಅತ್ಯಾಚಾರ ಸಂತ್ರಸ್ತೆ ಯುವತಿಯ ವಾಸದ ಮನೆಯೂ ಬಂಟ್ವಾಳ ನಗರ ಪೊಲೀಸ್ಠಾಣಾ ವ್ಯಾಪ್ತಿಯಗಿದ್ದು ನ.20ರಂದು ಬಂಟ್ವಾಳ ನಗರ ಠಾಣೆಗೆ ದೂರು ನೀಡಲು ಹೋಗಿದ್ದರು. ಆಗ ಠಾಣಾ ಪ್ರಭಾರ ಕರ್ತವ್ಯದಲ್ಲಿದ್ದ ರಘುರಾಮ ಹೆಗ್ಡೆ ದೂರು ದಾಖಲಿಸಿಕೊಂಡಿರಲಿಲ್ಲ. ಸಂತ್ರಸ್ತೆಯನ್ನು ಸಂಬಂಧಿಸಿದ ಠಾಣೆಗೆ ಕಳುಹಿಸಿಕೊಡುವುದು ಮತ್ತು ಸಂಬಂಧಿಸಿದ ಠಾಣೆಗೆ ಮಾಹಿತಿ ನೀಡುವ ಕೆಲಸವನ್ನೂ ಮಾಡಿರಲಿಲ್ಲ. ನ. 26 ರಂದು ಘಟನೆಗೆ ಸಂಬಂಧಪಟ್ಟಂತೆ ದೂರು ದಾಖಲಾದ ಕಾರಣ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ