ಸುರತ್ಕಲ್, ಡಿ 28 (DaijiworldNews/MS): ಕ್ಷುಲಕ ಕಾರಣಕ್ಕೆ ಫಿನಾಯಿಲ್ ಸೇವಿಸಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಡಿ.27 ರಂದು ನಡೆದಿದೆ. ಮೃತ ವ್ಯಕ್ತಿಯನ್ನು ಕಳವಾರು ನಿವಾಸಿ ಅಲೆಕ್ಸ್ ಪಿಂಟೋ ಎಂದು ಗುರುತಿಸಲಾಗಿದೆ.
ಕ್ರಿಸ್ಮಸ್ ಹಬ್ಬದ ಮಾರನೇ ದಿನ ಡಿ.26 ರಂದು ಮಧ್ಯಾಹ್ನ ಹಬ್ಬದ ಸಂಭ್ರಮದಲ್ಲಿ ಮದ್ಯ ಸೇವಿಸುತ್ತಿದ್ದ ವೇಳೆ , ತನ್ನ ತಾಯಿಗೆ ಭಯವನ್ನುಂಟು ಮಾಡುವ ಉದ್ದೇಶದಿಂದ ಫಿನಾಯಿಲ್ ಸೇವಿಸಿದ್ದಾರೆ.
ಸ್ವಲ್ಪ ಸಮಯದ ಬಳಿಕ ದಿಢೀರ್ ವಾಂತಿ ಮಾಡಲು ಆರಂಭಿಸಿದ್ದು ಕೂಡಲೇ ಮನೆಯವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.