ಮಂಗಳೂರು, ಡಿ 27 (DaijiworldNews/MS): ರಿವರ್ಸ್ ತೆಗೆಯುವ ಸಂದರ್ಭ ನಿಯಂತ್ರಣ ತಪ್ಪಿ ಆ್ಯಂಬುಲೆನ್ಸ್ ಎಂಟು ಅಡಿ ಎತ್ತರದಿಂದ ಉರುಳಿಬಿದ್ದ ಘಟನೆ ಫಳ್ನೀರ್'ನ ಖಾಸಗಿ ಆಸ್ಪತ್ರೆ ಬಳಿ ಡಿ. 27 ರ ಸೋಮವಾರ ನಡೆದಿದೆ.
ಆ್ಯಂಬುಲೆನ್ಸ್ ಪಲ್ಟಿಯಾದ ಪರಿಣಾಮ ಕೆಳಗೆ ಪಾರ್ಕ್ ಮಾಡಲಾಗಿದ್ದ 2ರಿಂದ 3 ಬೈಕ್ಗಳು ಜಖಂಗೊಂಡಿದೆ.
"ವಾಹನ ಹಿಂದಕ್ಕೆ ತೆಗೆಯುವ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿದ ನಂತ ರಸ್ತೆ ಪಕ್ಕದ ಗೋಡೆಗೆ ಢಿಕ್ಕಿ ಹೊಡೆದು ಪಲ್ಟಿಯಾಗಿ ಘಟನೆ ಸಂಭವಿಸಿದೆ. ಅಪಘಾತದ ವೇಳೆ ಚಾಲಕ ಮಾತ್ರ ಇದ್ದು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ" ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.