ಉಡುಪಿ, ಡಿ 02 (MSP): ಬಾಲಕರನ್ನು ಪುಸಲಾಯಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೋಕ್ಸೋ ಕಾಯ್ದೆಯಡಿ ಬಂಧಿಸಲ್ಪಟ್ಟ ಪತ್ರಕರ್ತ ಚಂದ್ರ ಕೆ.ಹೆಮ್ಮಾಡಿ (40) ವಿರುದ್ದ ಶನಿವಾರ ಮತ್ತೆ 6 ದೂರು ಬಂದಿದ್ದು ಈವರೆಗೆ ಒಟ್ಟು 16 ಕೇಸುಗಳು ದಾಖಲಾಗಿದೆ. ವಿಚಾರಣೆ ವೇಳೆ ಆರೋಪಿಯ ಲೈಂಗಿಕ ದೌರ್ಜನ್ಯ ಕೃತ್ಯಗಳು ಒಂದೊಂದೇ ಬೆಳಕಿಗೆ ಬರುತ್ತಿದ್ದು, ಪೋಷಕರನ್ನು ಬೆಚ್ಚಿ ಬೀಳಿಸಿವೆ.
ಶುಕ್ರವಾರದವರೆಗೆ 10 ಪ್ರಕರಣ ದಾಖಲಾಗಿದ್ದು, ಶನಿವಾರ ಮತ್ತೆ ಕುಂದಾಪುರ ಉಪವಿಭಾಗದ ಬೈಂದೂರಿನಲ್ಲಿ 14, ಗಂಗೊಳ್ಳಿ ಹಾಗೂ ಕುಂದಾಪುರ ಗ್ರಾಮಾಂತ್ರ ಠಾಣೆಯಲ್ಲಿ ತಲಾ 1 ಕೇಸು ದಾಖಲಾಗಿದೆ
ಹೇಗೆ ಕೃತ್ಯ ಎಸಗುತ್ತಿದ್ದ?: ಶಾಲಾ ಸಮಾರಂಭ ಗಳಿಗೆ ವರದಿ ಮಾಡಲು ತೆರಳು ತ್ತಿದ್ದ ಆರೋಪಿಯು, ಬಾಲಕರನ್ನು ಪರಿ ಚಯ ಮಾಡಿ ಕೊಳ್ಳುತ್ತಿದ್ದ. ಅವರ ಜತೆ ಆತ್ಮೀಯವಾಗಿ ಬೆರೆತು, ವಿಶ್ವಾಸ ಗಳಿಸುತ್ತಿದ್ದ. ನಂತರ ಮಕ್ಕಳ ಅಭಿರುಚಿಯನ್ನು ಗುರುತಿಸಿ ಗಾಯನ, ಫೋಟೊಗ್ರಫಿ, ನೃತ್ಯ ಹೇಳಿಕೊಡುವು ದಾಗಿ ಸೆಳೆಯುತ್ತಿದ್ದ. ಬಳಿಕ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಪೋರ್ನ್ ವಿಡಿಯೋ ಹಾಗೂ ಫೋಟೊಗಳನ್ನು ತೋರಿಸಿ, ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ನಂತಎಅ ವಿಷಯವನ್ನು ಯಾರಿಗೂ ತಿಳಿಸದಂತೆ ಹೆದರಿಸುತ್ತಿದ್ದ
ಆರೋಪಿ ಮೂರು ದಿನಗಳ ನ್ಯಾಯಾಂಗ ಬಂಧನದಲ್ಲಿದ್ದು, ಹೆಚ್ಚಿನ ವಿಚಾರಣೆಗೆ ವಶಕ್ಕೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದರು.