ಸೊಮಾಲಿಯಾದ ರಾಜಧಾನಿಯಲ್ಲಿ ಪ್ರಬಲ ಬಾಂಬ್ ಸ್ಫೋಟ ನಡೆದಿದ್ದು, ಸೊಮಾಲಿಯಾ ಸರಕಾರ ಈ ಘೋರ ಕೃತ್ಯವನ್ನು ರಾಷ್ಟ್ರೀಯ ದುರಂತವೆಂದು ಘೋಷಿಸಿದೆ.ಸೊಮಾಲಿಯದ ಇತಿಹಾಸದಲ್ಲಿ ಇದೊಂದು ಪ್ರಬಲ ಬಾಂಬ್ ಸ್ಪೋಟ ಎಂದು ಶಂಕಿಸಲಾಗಿದ್ದು ಘಟನೆಯಿಂದ 276 ಮಂದಿ ಬಲಿಯಾಗಿದ್ದಾರೆ ಮತ್ತು ಸುಮಾರು 300 ಮಂದಿ ಗಾಯಗೊಂಡಿದ್ದಾರೆ. ಘಟನೆಗೆ ಪ್ರಮುಖ ಕಾರಣ ಅಲ್ ಕಾಯಿದಾ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿರುವ ಅಲ್ ಶಬಾಬ್ ಎಂಬ ಉಗ್ರ ಸಂಘಟನೆ ಅಲ್ಲಿನ ಸರಕಾರ ನೇರವಾಗಿ ಆರೋಪಿಸಿದೆ. ಗಾಯಳುಗಳಲ್ಲಿ ಹಲವರ ಸ್ಥಿತಿ ಗಂಭೀರವಾಗಿದ್ದು ಮೃತರ ಸಂಖ್ಯೆ ಗಣನೀಯವಾಗಿ ಹೆಚ್ಚುವ ಸಾಧ್ಯತೆ ಇದೆ ಎಂದು ಸೊಮಾಲಿಯಾ ಸರ್ಕಾರ ತಿಳಿಸಿದೆ.