ಮಂಗಳೂರು, ಡಿ.25 (DaijiworldNews/PY): ಮಂಗಳೂರು ಧರ್ಮಪ್ರಾಂತ್ಯದ ರೆ. ಫಾ ಫೆಲಿಕ್ಸ್ ಜಾನ್ ನೊರೆನ್ಹಾ (63) ಅವರು ಡಿ.25ರ ಶನಿವಾರದಂದು ಹೃದಯಾಘಾತದಿಂದ ನಿಧನರಾದರು.
ಫಾದರ್ ಫೆಲಿಕ್ಸ್ ಮಡಂತ್ಯಾರು ಹಾಗೂ ಉಡುಪಿ ಚರ್ಚುಗಳಲ್ಲಿ ಸಹಾಯಕ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದರು. ಅಜೆಕಾರು ಹಾಗೂ ಗಂಗೊಳ್ಳಿ ಚರ್ಚಿನ ಪ್ರಧಾನ ಗುರುಗಳಾಗಿದ್ದರು. ಡಿವೈನ್ ಸೆಂಟರ್, ಕೇರಳ, ಫಾದರ್ ಮುಲ್ಲರ್ ಹಾಗೂ ಸ್ನೇಹಾಲಯ ಮಂಜೇಶ್ವರದಲ್ಲಿ ಚಾಪ್ಲೈನ್ ಆಗಿ ಸೇವೆ ನೀಡಿದ್ದರು.
ರೆ. ಫಾ ಫೆಲಿಕ್ಸ್ ಜಾನ್ ನೊರೆನ್ಹಾರ ಅಂತ್ಯಕ್ರಿಯೆ ಡಿ.27ರ ಸೋಮವಾರ ಮಧ್ಯಾಹ್ನ ಮಂಗಳೂರಿನ ವೆಲೆನ್ಸಿಯಾ ಚರ್ಚ್ನಲ್ಲಿ ನಡೆಯಲಿದೆ.