ಮಂಗಳೂರು, ಡಿ 01(SM): ಇನ್ನು ಮುಂದಕ್ಕೆ ಯಾರಾದರೂ ಅಕ್ರಮವಾಗಿ ಕಟ್ಟಡಗಳನ್ನು ಕಟ್ಟಿದರೆ ಇದುವರೆಗೆ ಕೇವಲ ಕಟ್ಟಡ ಮಾಲಕರಿಗೆ ಮಾತ್ರ ದಂಡ ವಿಧಿಸಲಾಗುತ್ತಿತ್ತು. ಆದರೆ ಇನ್ನು ಮುಂದೆ ಇಂತಹ ಅಕ್ರಮ ಕಟ್ಟಡಗಳು ಕಂಡು ಬಂದಲ್ಲಿ ಅದಕ್ಕೆ ಪರವಾನಿಗೆ ನೀಡಿದ ಅಧಿಕಾರಿಯೂ ಶಿಕ್ಷೆಗೆ ಒಳಗಾಗಬೇಕಾಗುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು ಟಿ ಖಾದರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ರಮ ಕಟ್ಟಡಕ್ಕೆ ಅನುಮತಿ ನೀಡುವ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕಾನೂನಿಗೆ ತಿದ್ದುಪಡಿ ತರಲಾಗುವುದು ಎಂದಿದ್ದಾರೆ.
ಇನ್ನು ಮಡಿಕೇರಿ ಮತ್ತು ಹಾಸನದಲ್ಲಿ ನಡೆದ ಭೂಕುಸಿತದ ನೆರೆಸಂತ್ರಸ್ತರಿಗೆ ಡಬಲ್ ಬೆಡ್ರೂಂ ಮನೆ ಕಟ್ಟಿಕೊಡಲು ಹಾಗೂ ಮೂಲಭೂತ ಸೌಕರ್ಯಗಳನ್ನು ಮಾಡಲು ಸರಕಾರ ಸಿದ್ಧವಿದೆ. ಸಂತ್ರಸ್ತರಿಗೆ, ಪ್ರಕೃತಿ ವಿಕೋಪಕ್ಕೆ ಒಳಗಾದವರ ಜೊತೆಗೆ ಹೇಗೆ ಸ್ಪಂದನೆ ಮಾಡಬೇಕು ಎಂದು ಕರ್ನಾಟಕ ಸರಕಾರ ದೇಶಕ್ಕೆ ತೋರಿಸಿಕೊಟ್ಟಿದೆ ಎಂದು ಅವರು ಹೇಳಿದ್ದಾರೆ.