ಸುಳ್ಯ, ಡಿ 22 (DaijiworldNews/MS): ಇಲ್ಲಿನ ಜಯನಗರದ ಮನೆಯೊಂದರಲ್ಲಿ ಮೂವರು ಬಾಲಕರು ಗಮ್ ಒಂದರ ವಾಸನೆ ಸೇವನೆ ಮಾಡುತ್ತಿರುವುದನ್ನು ಸಂದರ್ಭ ಸ್ಥಳೀಯರು ಅವರನ್ನು ಹಿಡಿದು ಸುಳ್ಯ ಪೊಲೀಸರಿಗೆ ಒಪ್ಪಿಸಿದ್ದಾರೆ.
ಪ್ರಾತಿನಿಧಿಕ ಚಿತ್ರ
ಒಂಭತ್ತು ಹಾಗೂ ಹತ್ತು ವರ್ಷದ ಮೂವರು ಬಾಲಕರು, ಗಮ್ ವಾಸನೆ ಸೇವನೆ ಮಾಡುತ್ತಿದ್ದರು. ಇದನ್ನು ಸ್ಥಳೀಯರು ಗಮನಿಸಿ ತಕ್ಷಣ ಪೊಲೀಸರಿಗೆ ಒಪ್ಪಿಸಿದ್ದಾರೆ. ವಿಚಾರಣೆ ಮಾಡಿದ ಪೊಲೀಸರು ಹೆತ್ತವರನ್ನು ಕರೆಯಿಸಿ ಎಚ್ಚರಿಕೆ ಹಾಗೂ ತಿಳಿಹೇಳಿ ಕಳುಹಿಸಿದ್ದಾರೆ.
ಗ್ರಾಮೀಣ ಪ್ರದೇಶದಲ್ಲೂ ಎಳೆಯ ಮಕ್ಕಳು ವ್ಯಸನಗಳಿಗೆ ಬಲಿಯಾಗುತ್ತಿದ್ದು ಈ ಬಗ್ಗೆ ಪೋಷಕರು ತಮ್ಮ ಮಕ್ಕಳ ಬಗ್ಗೆ ಗಮನಹರಿಸುವ ಅಗತ್ಯತೆ ಇದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.