ಮಂಜೇಶ್ವರ,ಅ 16 : ಪ್ಲಾಸ್ಟಿಕ್ ಮತ್ತು ಇ-ತ್ಯಾಜ್ಯದ ವಿಲೇವಾರಿ ಬಗ್ಗೆ ಮಂಜೇಶ್ವರ ಗ್ರಾಮ ಪಂಚಾಯತ್ ನಲ್ಲಿರುವ ಮನೆಗಳು ಚಿಂತೆ ಮಾಡಬೇಕಿಲ್ಲ. ಕಾರಣ ಇಲ್ಲಿ ಮನೆ ಮನೆಗೆ ಬೇಟಿ ನೀಡಿ ಹಸಿರು ಸ್ವಯಂಸೇವಕರು (ಹರಿತಾ ಕರ್ಮ ಸೇನೆ) ಸಾವಯವಲ್ಲದ ತಾಜ್ಯಗಳನ್ನು ಸಂಗ್ರಹಿಸುತ್ತಿದಾರೆ. ಕೇರಳ ಸರಕಾರದ ಪರಿಕಲ್ಪನೆಯಾದ ಈ ಘನ ತ್ಯಾಜ್ಯ ಸಂಗ್ರಹ ಪ್ರಾಯೋಗಿಕ ಹಂತವಾಗಿ ಮಂಜೇಶ್ವರದಲ್ಲಿ ಪ್ರಾರಂಭಿಸಲಾಗಿದೆ. ಸರಕಾರದೊಂದಿಗೆ ಕೈಜೋಡಿಸಿರುವ ಸ್ಥಳೀಯ ಸಂಸ್ಥೆ ಗ್ರೀನ್ ಸ್ಪೇಸ್ ಜೈವಿಕವಾಗಿ ವಿಘಟನೀಯಾಗದ ಘನ ತ್ಯಾಜ್ಯಗಳನ್ನು ಪ್ರತಿ ವಾರ ಮನೆಗಳಿಗೆ ತೆರಳಿ ಅಲ್ಲಿಂದ ನೇರವಾಗಿ ಸಂಗ್ರಹಿಸಲಾಗುವುದು ಎಂದು ತಿಳಿಸಿದ್ದಾರೆ.
ಮಂಜೇಶ್ವರ ಗ್ರಾಮ ಪಂಚಾಯತ್, ಗ್ರೀನ್ ಸ್ಪೇಸ್ ಪರಿಹಾರ ಮತ್ತು ಮಂಜೇಶ್ವರ ಜಿಪಿಎಂ ಸರ್ಕಾರಿ ಕಾಲೇಜಿನ ಎನ್.ಎಸ್.ಎಸ್. ಘಟಕ ಜಂಟಿಯಾಗಿ ತ್ಯಾಜ್ಯ ಮುಕ್ತ ಮತ್ತು ಜಾಗೃತಿ ಅಭಿಯಾನಕ್ಕೆ ಕೈ ಜೋಡಿಸಿದೆ. ಮಂಜೇಶ್ವರ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಅಶ್ರಫ್, ಮಂಜೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಜೀಜ್ ಹಾಜಿ, ಬ್ಲಾಕ್ ಪಂಚಾಯತ್ ಸದಸ್ಯ ಮಸ್ತಫಾ, ವಾರ್ಡ್ ಸದಸ್ಯ ಬಗಾನ್, ಗ್ರೀನ್ ಸ್ಪೇಸ್ ಅಧ್ಯಕ್ಷ ಮುಹಮ್ಮದ್ ಮುಖ್ತರ್, ಇಸ್ಮಾಯಿಲ್ ಇರ್ಫಾನ್, ನಿಯಾಜ್ ಕುಂಜಾತುರ್, ಎನ್.ಎಸ್.ಎಸ್ ಪ್ರತಿನಿಧಿ ರೇವತಿ ಮುಂತಾದವರು ಭಾಗವಹಿಸಿದ್ದರು.