ನವದೆಹಲಿ, ನ 30 (MSP): ಈ ಆಧುನಿಕ ಯುಗದಲ್ಲಿ ತಂತ್ರಜ್ಞಾನ ತನ್ನ ದಾಪುಗಾಲು ಓಟವನ್ನು ಮುಂದುವರಿಸಿದೆ. ಇದೇ ನಿಟ್ಟಿನಲ್ಲಿ ಸಾರಿಗೆ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳಾಗುತ್ತಿದೆ. ಹೈಪರ್ ಲೂಪ್ ಹಾಗೂ ಚಾಲಕ ರಹಿತ ಕಾರು, ನೀರಿನಲ್ಲಿ ಚಲಿಸುವ ಬಸ್ಸ್, ಹಾರುವ ಕಾರು, ಟ್ರಾಪಿಕ್ ಇದ್ದರೂ ಸಮಸ್ಯೆಯಿಲ್ಲದೆ ಓಡಾಡುವ ಬಸ್ಸು ಹೀಗೆ ಸರಕು ಸಾಗಣೆ ಹಾಗೂ ಪ್ರಯಾಣಿಕರ ಓಡಾಟಕ್ಕಾಗಿ ಹೊಸ ಸಾರಿಗೆ ವಿಧಾನಗಳ ಬಗ್ಗೆ ಸಂಶೋಧನೆ ಮುಂದುವರಿಯುತ್ತಿದೆ. ಇದೇ ಆಶಯದೊಂದಿಗೆ ಈಗ ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ) ಹೊಸ ಯೋಜನೆಯೊಂದನ್ನು ಸಿದ್ದಪಡಿಸುತ್ತಿದೆ. ಒಂದು ವೇಳೆ ಈ ರೂಪುರೇಷೆಯೂ ಕಾರ್ಯ ರೂಪಕ್ಕೆ ಬಂದರೆ ದುಬೈ ಮತ್ತು ಮುಂಬೈ ಭಾಯೀ ಭಾಯೀ ಆಗುವುದರಲ್ಲಿ ಸಂಶಯವಿಲ್ಲ.
ಯುಎಇ ಈ ಯೋಜನೆಯ ಪ್ರಕಾರ ಫುಜೈರಾದಿಂದ ಮುಂಬೈವರೆಗೆ ಸಮುದ್ರದಾಳದಲ್ಲಿ ರೈಲು ಸಂಚಾರ ಮಾರ್ಗದ ನೆಟ್ ವರ್ಕ್ ಸ್ಥಾಪನೆ ಮಾಡಲಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಈ ಮಾರ್ಗದಲ್ಲಿ ಪ್ರಯಾಣಿಕ ಸಾರಿಗೆಯೂ ನಡೆಯುತ್ತದೆ.
ಉತ್ತೇಜಿಸುವ ಪ್ರೋತ್ಸಾಹಿಸುವ ಕೆಲಸ ಮಾಡಿ ಖ್ಯಾತಿ ಗಳಿಸಿದೆ. ಈ ಯೋಜನೆಯ ಬಗ್ಗೆ ಮಾತನಾಡಿರುವ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಸಹಾಯಕ ಅಬ್ದುಲ್ಲಾ ಅಲ್ಮೇಶಿ, ಈ ಯೋಜನೆಯು ಯುನೈಟೆಡ್ ಅರಬ್ ಎಮಿರೇಟ್ಸ್ ಹಾಗೂ ಭಾರತಕ್ಕೆ ಮಾತ್ರವಲ್ಲದೆ ಇದೇ ಭಾಗದಲ್ಲಿರುವ ಇತರ ದೇಶಗಳಿಗೆ ಈ ಯೋಜನೆ ಸಹಾಯಕಾರಿಯಾಗಲಿದೆ ಎಂದಿದ್ದಾರೆ.
ಈ ಯೋಜನೆಯ ಮತ್ತೊಂದು ವಿಶೇಷತೆ ಅಂದರೆ ಮುಂಬೈಯಲ್ಲಿರುವ ನರ್ಮದಾ ನದಿಯಿಂದ ಸಮುದ್ರಕ್ಕೆ ಸೇರುವ ನೀರನ್ನು ಈ ರೈಲು ಮೂಲಕ ದುಬೈಗೆ ಸಾಗಾಟ ಮಾಡುವುದಾಗಿದೆ. ಅಲ್ಲದೆ ಅಲ್ಲಿಂದ ತೈಲವನ್ನು ಮುಂಬೈಗೆ ರವಾನಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ವಿಶಿಷ್ಟ ಯೋಜನೆಯಲ್ಲಿ 2 ಸಾವಿರ ಕಿ.ಮೀ ದೂರದ ರೈಲು ನೆಟ್ ವರ್ಕ್ ಯೋಜನೆಯಾಗಿದೆ. ಯುಎಇ ಮಾತ್ರವಲ್ಲದೆ ಇತರ ದೇಶಗಳಲ್ಲಿಯೂ ಇದೇ ರೀತಿಯ ಯೋಜನೆಗಳು ಜಾರಿಯಲ್ಲಿದೆ. ಒಟ್ಟಾರೆ ಈ ಯೋಜನೆಯನ್ನು ರೂಪಿಸಿದ್ದರೂ ಇದರ ಕಾರ್ಯ ಸಾಧ್ಯತೆಯ ಬಗ್ಗೆ ಇನ್ನಷ್ಟೇ ಅಧ್ಯಯನ ನಡೆಯಬೇಕಾಗಿದೆ.