ಸುಳ್ಯ, ಡಿ.19 (Daijiworld/PY): ತಮ್ಮ ಅಪ್ರಾಪ್ತ ಮಕ್ಕಳಿಗೆ ಪೋಷಕರು ಕೀ ಕೊಟ್ಟರೆ ಭಾರಿ ಮೊತ್ತದ ದಂಡ ಬೀಳುತ್ತದೆ. ಈ ರೀತಿಯ ಘಟನೆ ಸುಳ್ಯದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸುಳ್ಯ ತಾಲೂಕಿನ ದೇವಚಳ್ಳದ ಅಪ್ರಾಪ್ತ ಬಾಲಕನೋರ್ವ ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದ ಸಂದರ್ಭ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈ ಪ್ರಕರಣದ ವಿಚಾರಣೆ ನಡೆಸಿದ ಸುಳ್ಯ ನ್ಯಾಯಾಲಯ ಪೋಷಕರಿಗೆ 10,000 ರೂ. ದಂಡ ವಿಧಿಸಿದೆ.
ಸುಳ್ಯ ತಾಲೂಕಿನ ದೇವಚಳ್ಳ ಗ್ರಾಮದ ಸುರೇಶ ಎನ್ನುವವರು ತನ್ನ ಅಪ್ರಾಪ್ತ ಮಗನಿಗೆ ದ್ವಿಚಕ್ರ ವಾಹನ ಚಲಾಯಿಸಲು ಅನುಮತಿ ನೀಡಿದ್ದರು. ಈ ಕುರಿತು ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಸುಳ್ಯ ಸಿಜೆ ಹಾಗೂ ಜೆಎಂಎಫ್ಸಿ ನ್ಯಾಯಾಲಯ ಬಾಲಕನ ಪೋಷಕರಿಗೆ 10,000 ರೂ. ದಂಡ ವಿಧಿಸಿದೆ.