ಮಂಗಳೂರು, ಡಿ.19 (Daijiworld/PY): ನಗರದ ಮಾರ್ಕೆಟ್ ರಸ್ತೆಯ ಸಿಟಿ ಮಾರ್ಕೆಟ್ ಕಟ್ಟಡದಲ್ಲಿರುವ ದುಬೈ ಮಾರ್ಕೆಟ್ನಲ್ಲಿ ಭಾನುವಾರ ಮುಂಜಾನೆ 2.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ.
ಮಾರ್ಕೆಟ್ನಲ್ಲಿರುವ ಗೋದಾಮು ಸಹಿತ ಎರಡು ಅಂಗಡಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸುಟ್ಟು ಭಸ್ಮವಾಗಿವೆ. ಶಾರ್ಟ್ ಸರ್ಕ್ಯೂಟ್ನಿಂದ ಈ ಅವಘಡ ಸಂಭವಿಸಿದೆ ಎಂದು ಶಂಕಿಸಲಾಗಿದೆ.
ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಹಾಗೂ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ಧಾರೆ.