ಕಾಸರಗೋಡು, ಡಿ.15 (DaijiworldNews/SM): ನಾಲ್ಕೂವರೆ ಗ್ರಾಂ ಎಂ.ಡಿ.ಎಂ.ಎ. ಮಾದಕ ವಸ್ತು ಸಹಿತ ಯುವಕನೋರ್ವನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.
ಉಪ್ಪಳ ಕೋಡಿಬೈಲ್ ನ ಮುಹಮ್ಮದ್ ನವಾಜ್(28) ಬಂಧಿತ ಆರೋಪಿಯಾಗಿದ್ದಾನೆ.
ಮನೆ ಸಮೀಪದಿಂದ ಈತನನ್ನು ಮಾದಕ ವಸ್ತು ಸಹಿತ ಬಂಧಿಸಲಾಗಿದೆ. ಮಾದಕವಸ್ತುವನ್ನು ಇನ್ನೋರ್ವನಿಗೆ ಹಸ್ತಾಂತರಿಸಲು ಈತ ತೆರಳುತ್ತಿದ್ದಾಗ ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ದಾಳಿ ನಡೆಸಿ ಈತನನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.