ಉಡುಪಿ, ನ 28(SM): ಜಾನಪದ ಕಲಾವಿದ ಗುರುವ ಕೊರಗರ ಹಾಗೂ 99 ವರ್ಷ ಪ್ರಾಯದ ಯಕ್ಷಗಾನ ಕಲಾವಿದ ಹಿರಿಯಡ್ಕ ಗೋಪಾಲ ರಾವ್ ಸೇರಿದಂತೆ ಒಟ್ಟು ನಾಲ್ಕು ಮಂದಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಹಿರಿಯಡ್ಕ ಗೋಪಾಲ ರಾವ್
ಗುರುವ ಕೊರಗ
ಆನಂದ ಸಿ ಕುಂದರ್
ಉಡುಪಿ ತಾಲೂಕಿನ ಹಿರಿಯಡ್ಕ ಗುಡ್ಡೆಯಂಗಡಿ ನಿವಾಸಿ ಗುರುವ ಕೊರಗ(104) ಜಾನಪದ ಕ್ಷೇತ್ರದಲ್ಲಿ ಪ್ರಶಸ್ತಿ ಲಭಿಸಿದೆ. ತನ್ನ 10ನೇ ವಯಸ್ಸಿನಲ್ಲಿಯೇ ತಂದೆಯಿಂದ ಡೋಲು ಭಾರಿಸುವುದನ್ನು ಕಲಿತ ಗುರುವ ಅವರು 91 ವರ್ಷಗಳಿಗೂ ಸುಧೀರ್ಘ ಕಾಲದಿಂದ ಡೋಲು ಭಾರಿಸುತ್ತಿದ್ದಾರೆ. ಈಗಾಗಲೇ ಅವರಿಗೆ ಕರ್ನಾಟಕ ರಾಜ್ಯ ಜನಪದ ಅಕಾಡೆಮಿಯ ಪ್ರಶಸ್ತಿ ಕೂಡ ಲಭಿಸಿದೆ.
ಪತ್ರಿಕೋದ್ಯಮದಲ್ಲಿ ಅಮ್ಮೆಂಬಳ ಆನಂದ ಹಾಗೂ ಸಮಾಜ ಸೇವೆಯ ಕ್ಷೇತ್ರದಲ್ಲಿ ಆನಂದ ಸಿ ಕುಂದರ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.