ಮಂಗಳೂರು, 28(MSP): ತೋಟ ಬೆಂಗ್ರೆಯಲ್ಲಿ ನ.18 ರಂದು ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಂಧಿತ ಆರೋಪಿಗಳ ಪರ ವಾದಿಸದಂತೆ ದ.ಕ. ಜಿಲ್ಲೆಯ ಸರ್ವ ಕಾಲೇಜು ವಿದ್ಯಾರ್ಥಿ ಸಂಘವು ಜಿಲ್ಲಾ ವಕೀಲರ ಸಂಘಕ್ಕೆ ಮನವಿ ಮಾಡಿದೆ.
ಸುಶಿಕ್ಷಿತರ ಜಿಲ್ಲೆ ಎಂಬ ಖ್ಯಾತಿಗೆ ಈ ಪ್ರಕರಣ ಕಳಂಕವನ್ನುಂಟು ಮಾಡಿದೆ. ಇಂಥಹ ಹೀನ ಕೃತ್ಯ ಎಸಗಿದ ಆರೋಪಿಗಳು ಸಮಾಜಕ್ಕೆ ಮಾರಕ. ಹೀಗಾಗಿ ಬಂಧನವಾದ ಆರೋಪಿಗಳ ಪರ ವಾದಿಸದೆ ದುಷ್ಕೃತ್ಯ ಎಸಗಿದ ಕೀಚಕರಿಗೆ ಕಠಿಣ ಶಿಕ್ಷೆಯಾಗಲು ಸಹಕರಿಸಬೇಕು ಎಂದು ಮನವಿ ಸಲ್ಲಿಸಿದೆ.
ದ.ಕನ್ನಡ ಜಿಲ್ಲಾ ವಕೀಲರ ಸಂಘವು, ಯಾರೊಬ್ಬರು ಕೂಡಾ ಆರೋಪಿಗಳ ಪರ ವಾದಿಸದಂತೆ ವಕೀಲರಿಗೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿದೆ. ಒಂದು ವೇಳೆ ಯಾರದರೂ ಲಾಯರ್ ಗಳು ಆರೋಪಿಗಳ ಪರ ವಕಾಲತ್ತು ನಡೆಸಿದರೆ ಅವರ ಕಚೇರಿ ಮುಂದೆ ವಿದ್ಯಾರ್ಥಿ ಸಂಘ, ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದೆ.
ಮಈ ಸಾಂದರ್ಭ ಸಂಘದ ಪದಾಧಿಕಾರಿಗಳಾದ ಗುರುದತ್ ಮಲ್ಲಿ, ಇಬ್ರಾಹೀಂ ಬಾತೀಶ್, ಆ್ಯಸ್ಟಲ್ ಲೋಬೊ, ಮೇಘಾ, ನಿಹಾಲ್ ರೈ, ಅಶ್ವಿತ್ ಅಡಪ, ಅನ್ವಿತಾ ಶೆಟ್ಟಿ, ಪ್ರಿಯಾಂಕಾ ಶೆಟ್ಟಿ, ಶೈನಿ, ಮಜೀದ್ ಕೊರೆಪಾಡಿ, ಸುಲೈಮಾನ್ ಶಾಫಿ, ಅಶ್ಫಾಕ್,ಸೋಹನ್ ಕಾರಂತ್ ಮುಂತಾದವರು ಉಪಸ್ಥಿತರಿದ್ದರು.