ಕಾಸರಗೋಡು, ಡಿ. 13 (DaijiworldNews/HR): ಫ್ಯಾಶನ್ ಡಿಸೈನಿಂಗ್ ವಿದ್ಯಾರ್ಥಿನಿಯೋರ್ವಳು ನಾಪತ್ತೆಯಾಗಿರುವುದಾಗಿ ಕುಂಬಳೆ ಠಾಣಾ ಪೊಲೀಸರಿಗೆ ದೂರು ನೀಡಲಾಗಿದೆ.
ಕಟ್ಟತ್ತಡ್ಕ ಸಜಂಕಿಲದ ರಮಿಸಾ (19) ನಾಪತ್ತೆಯಾದವಳು.
ಶನಿವಾರ ಬೆಳಿಗ್ಗೆಯಿಂದ ಈಕೆ ನಾಪತ್ತೆಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಎರಡು ಮೊಬೈಲ್ ಫೋನ್, ತಾಯಿಯ ಎ.ಟಿ.ಎಂ ಕಾರ್ಡ್, ಹಾಗೂ ಸ್ಕೂಟರ್ ಸಹಿತ ಈಕೆ ಮನೆಯಿಂದ ತೆರಳಿದ್ದು, ಈಕೆಯ ಸ್ಕೂಟರ್ ಕುಂಬಳೆ ಸಮೀಪ ರಸ್ತೆ ಬದಿ ಪತ್ತೆಯಾಗಿದೆ.
ಇನ್ನು ಪೊಲೀಸರು ಸ್ಕೂಟರನ್ನು ವಶಕ್ಕೆ ತೆಗೆದುಕೊಂಡಿದ್ದು, ತನಿಖೆಯನ್ನು ಚುರುಕುಗೊಳಿಸಿದ್ದಾರೆ.