ಕಾಸರಗೋಡು, ಡಿ. 13 (DaijiworldNews/HR): ಜಿಲ್ಲೆಯಲ್ಲಿ ಸೋಮವಾರ 54 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 44 ಮಂದಿ ಗುಣಮುಖರಾಗಿದ್ದಾರೆ.
ಜಿಲ್ಲೆಯಲ್ಲಿ 664 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, 4,351 ಮಂದಿ ನಿಗಾ ದಲ್ಲಿದ್ದಾರೆ.
ಇನ್ನು ಜಿಲ್ಲೆಯಲ್ಲಿ ಇದುವರೆಗೆ 1,42,778 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಪೈಕಿ 1,40,865 ಮಂದಿ ಗುಣಮುಖರಾಗಿದ್ದಾರೆ. 790 ಮಂದಿ ಮೃತಪಟ್ಟಿದ್ದಾರೆ.