ಹಾಸನ, ನ 28(MSP): ಸಿಎಂ ಎಚ್.ಡಿ. ಕುಮಾರಸ್ವಾಮಿಯಿಂದ ಅಣ್ಣ ಎಂದು ಕರೆಯಿಸಿಕೊಳ್ಳವ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ ರೇವಣ್ಣಗೆ ಹೆಚ್ಡಿಕೆ ವಾರ್ನಿಂಗ್ ನೀಡಿದ್ದಾರೆ. ಹಾಸನದಲ್ಲಿ ಮಂಗಳವಾರದಂದು ಮುಖ್ಯಮಂತ್ರಿ ಕುಮಾರಸ್ವಾಮಿ ಉಪಸ್ಥಿತಿಯಲ್ಲಿ ಸಭೆ ನಡೆಯುತ್ತಿತ್ತು. ಈ ಸಂದರ್ಭ ಸಿಎಂ ಹೆಚ್ಡಿಕೆ ಅಣ್ಣನ ಮೇಲೆ ಗರಂ ಆಗಿ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಮೀಟಿಂಗ್ ನಲ್ಲಿ ರಾಜ್ಯದ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿದ್ದರು. ಆಗ ಸಚಿವ ರೇವಣ್ಣ ತಮ್ಮ ಜಿಲ್ಲೆಯಾದ ಬರೀ ಹಾಸನದ ಬಗ್ಗೆ ಮಾತ್ರ ಗಮನಹರಿಸಿ ಹಾಸನಕ್ಕೆ ಸಂಬಂಧಿಸಿದ ಪ್ರಶ್ನೆಯನ್ನು ಮಾತ್ರ ಕೇಳುತ್ತಿದ್ದರು. ಮೊದಲಿಗೆ ಸಾವಧಾನವಾಗಿ ಉತ್ತರಿಸುತ್ತಿದ್ದ ಸಿಎಂಗೆ ಬಳಿಕ ಹಾಸನ ಬಗ್ಗೆಯ ಪ್ರಶ್ನೆಯಿಂದ ಮುಜುಗರವಾಗತೊಡಗಿದೆ. ಹೀಗಾಗಿ ಕೋಪಗೊಂಡ ಸಿಎಂ ಕುಮಾರಸ್ವಾಮಿ ಅವರು ರೇವಣ್ಣ ವಿರುದ್ಧವೇ ಗರಂ ಆಗಿ ತಮ್ಮ ಸಿಟ್ಟನ್ನು ಹೊರಹಾಕಿದರು.
ರೇವಣ್ಣ ಪ್ರಶ್ನಿಗೆ ಉತ್ತರಿಸಿದ ಸಿಎಂ ಇಲ್ಲಿ ನಡೆಯುತ್ತಿರುವುದು ರಾಜ್ಯ ಅಭಿವೃದ್ಧಿಗೆ ಸಂಬಂಧ ಪಟ್ಟ ಸಭೆಯಾಗಿದೆ. ನೀವು ಹಾಸನಕ್ಕೆ ಮಾತ್ರ ಸಚಿವರೇ ಅಥವಾ ರಾಜ್ಯಕ್ಕೂ ಸಚಿವರೇ ಎಂದು ಪ್ರಶ್ನಿಸಿದ್ದಾರೆ. ಸಭೆಯಲ್ಲಿ ನಿಮ್ಮ ಹಾಸನದ ಬಗ್ಗೆಯಷ್ಟೆ ಪ್ರಶ್ನೆ ಕೇಳಿದರೆ ಹೇಗಾಗುತ್ತದೆ ಎಂದು ಕೋಪಗೊಂಡು ಸಿಎಂ , ರೇವಣ್ಣ ಅವರನ್ನು ಪ್ರಶ್ನಿಸಿದ್ದಾರೆ ಎಂದು ತಿಳಿದುಬಂದಿದೆ.