ಉಡುಪಿ, ಡಿ. 13 (DaijiworldNews/HR): ಕೊರೊನಾ ಲಸಿಕೆಯನ್ನು ಪ್ರತಿಯೊಬ್ಬರು ಹಾಕಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಜಿಲ್ಲಾಡಳಿತವು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತಿದ್ದು ಇದೀಗ ಇದಕ್ಕೆ ಕೆಎಸ್ಸಾರ್ಟಿಸಿ ಕೂಡ ಕೈಜೋಡಿಸಿದೆ.
ಕರ್ನಾಟಕದಲ್ಲಿ ಓಡಾಡುವ ಕೆಎಸ್ಸಾರ್ಟಿಸಿ ಬಸ್ಗಳ ಟಿಕೆಟ್ಗಳಲ್ಲಿ ಕಡ್ಡಾಯವಾಗಿ 2 ಡೋಸ್ ಲಸಿಕೆ ಹಾಕಿಕೊಳ್ಳಬೇಕು, ಮಾಸ್ಕ್ ಹಾಕಿಕೊಳ್ಳಬೇಕು ಎಂಬ ಬರಹಗಳನ್ನು ಮುದ್ರಿಸಲಾಗಿದೆ.
ಈ ರೀತಿಯ ಬರಹಗಳನ್ನು ಮುದ್ರಿಸುವ ಮೂಲಕ ಬಸ್ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಲ್ಲಿ ಹಾಗೂ ಜನರಲ್ಲಿ ಕೊರೊನಾ ಬಗ್ಗೆ ಜಾಗರೂಕತೆಯನ್ನು ಮೂಡಿಸುವ ನಿಟ್ಟಿನಲ್ಲಿ ಹೊಸ ರೀತಿಯ ಯೋಜನೆಯನ್ನು ಹಮ್ಮಿಕೊಂಡಿದೆ.
ಇನ್ನು ಈ ರೀತಿಯ ಬರಹಗಳನ್ನು ಮುದ್ರಿಸಿರುವುದಕ್ಕೆ ಸಾರಿಗೆ ಇಲಾಖೆಯ ಕಾರ್ಯವನ್ನು ಜಿಲ್ಲಾಧಿಕಾರಿ ಕೂರ್ಮಾರಾವ್ ಶ್ಲಾಘಿಸಿದ್ದಾರೆ.
ಇತರ ಇಲಾಖೆಗಳು, ನಿಗಮಗಳು ಸಾರ್ವಜನಿಕರಲ್ಲಿ ಕೊರೊನಾದ ಬಗ್ಗೆ ಜಾಗೃತಿಯನ್ನು ಮೂಡಿಸುವಲ್ಲಿ ಕಾರ್ಯಪ್ರವೃತ್ತರಾಗುವಂತೆ ಹಾಗೂ ಮಾಲ್ಗಳಲ್ಲಿ, ಸಿನೆಮಾ ಮಂದಿರಗಳಲ್ಲಿ ಮತ್ತು ಎಲ್ಲ ಅಂಗಡಿಗಳಲ್ಲಿ ಗ್ರಾಹಕರಿಗೆ ನೀಡುವ ಬಿಲ್ಲು, ಸ್ವೀಕೃತಿಗಳಲ್ಲಿ ಇದೇ ಮಾದರಿಯಲ್ಲಿ ಜಾಗೃತಿಯನ್ನು ಮೂಡಿಸುವ ಬರಹಗಳನ್ನು ನಮೂದಿಸುವಂತೆ ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ.