ಬಂಟ್ವಾಳ, ಡಿ.12 (DaijiworldNews/SM): ಬೆಂಗಳೂರನ್ನು ಹೊರತುಪಡಿಸಿದರೆ ರಾಜ್ಯದ ಮೊದಲ ಸಿಎನ್ ಜಿ ಇಂಧನ ಬಳಕೆಯ ಬಸ್ಸು ರಸ್ತೆಗಿಳಿದಿದೆ. ಡಿ. ೧೧ರಿಂದ ಮಂಗಳೂರು-ಉಪ್ಪಿನಂಗಡಿ ರಸ್ತೆಯಲ್ಲಿ ಬಸ್ ಸಂಚಾರ ಆರಂಭಿಸಲಿದೆ.
ಅಲಿನಾ ಹೆಸರಿನ ಕಾಂಟ್ರಾಕ್ಟ್ ಕ್ಯಾರೇಜ್ ಈ ಬಸ್ಸು ಸುಮಾರು 30 ಲಕ್ಷ ರೂ. ಮೌಲ್ಯವನ್ನು ಹೊಂದಿದೆ. 80 ಕೆ.ಜಿ.ಯಷ್ಟು ಸಿಎನ್ ಜಿ ತುಂಬುವ ಟ್ಯಾಂಕನ್ನು ಒಳಗೊಂಡಿದೆ. ಆದರೆ ಸಿಎನ್ ಜಿ ಹೊರತುಪಡಿಸಿದರೆ ಈ ಬಸ್ಸು ಡಿಸೇಲ್ ಹಾಕಿ ಓಡಿಸುವಂತಿಲ್ಲ. ಹೀಗಾಗಿ ಸಿಎನ್ ಜಿ ಸಮರ್ಪಕವಾಗಿ ಪೂರೈಕೆ ಇರದೇ ಇರುವುದರಿಂದ ಇದು ಬಹಳ ಸವಾಲಿನ ಉದ್ಯಮವಾಗಿದೆ.
ಮಂಗಳೂರು ಅಡ್ಯಾರ್ ಮೂಲದ ಉದ್ಯಮಿ ರೊನಾಲ್ಡ್ ಡಿಸೋಜ ಅವರು ಈ ಬಸ್ಸನ್ನು ಖರೀದಿಸಿದ್ದು, ಬಸ್ಸಿನ ಮೈಲೇಜ್ ಸಾಮರ್ಥ್ಯ ಖಚಿತಗೊಂಡಿಲ್ಲ.