ಮಂಗಳೂರು, ಅ 16: ಲೇಡಿ ಹಿಲ್ ಸರ್ಕಲ್ ಬಳಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಇಂದು ಮೇಯರ್ ಕವಿತಾ ಸನಿಲ್ ಗುದ್ದಲಿ ಪೂಜೆ ನೆರವೇರಿಸಿದರು. ಸುಮಾರು 2500 ಕೋಟಿ ವೆಚ್ಚದಲ್ಲಿ ನಡೆಯುವ ಕಾಮಗಾರಿಯಲ್ಲಿ, ಸ್ಮಾರ್ಟ್ ಸಿಟಿ ಯೋಜನೆ, ಎಡಿಬಿ ಯೋಜನೆ,ಬಂದರು ಅಭಿವೃದ್ದಿ, ಒಳಗೊಂಡಿದ್ದು ಕಾಮಗಾರಿ ಪೂರ್ಣಗೊಳ್ಳಲು 3 ವರ್ಷ ತಗುಲಲಿದೆ. ಶಿಲಾನ್ಯಾಸ ನೇರವೇರಿಸಿದ ಬಳಿಕ ಮಾತನಾಡಿದ ಮೇಯರ್ ಕನಿತಾ ಸನಿಲ್, ನಗರಲ್ಲಿ ರಸ್ತೆ ಹೊಂಡ ಬಿದ್ದಿರುವ ಬಗ್ಗೆ ನಾಗರೀಕರಿಂದ ಹಲವು ದೂರುಗಳು ಕೇಳಿ ಬರುತ್ತಿದ್ದು, ರಸ್ತೆಗಳ ದುರಸ್ತಿಗಾಗಿ ಕರೆದಿರುವ ಟೆಂಡರ್ ಪ್ರಕ್ರಿಯೆಯೂ ಪೂರ್ಣಗೊಂಡಿದ್ದು, ಮಳೆ ನಿಂತ ಬಳಿಕ ಕಾಮಗಾರಿ ಪ್ರಾರಂಭಿಸುವ ಭರವಸೆ ನೀಡಿದರು.
ಅಭಿವೃದ್ಧಿ ಕಾರ್ಯಗಳು
30 ಲಕ್ಷ ವೆಚ್ಚದಲ್ಲಿ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಮರೋಳಿ ಸೂರ್ಯನಾರಾಯನ ದೇವಸ್ಥಾನದಿಂದ ಶಾಂತಿಗುರಿ ರಸ್ತೆ ಅಭಿವೃದ್ದಿ,
60 ಲಕ್ಷ ವೆಚ್ಚದಲ್ಲಿ ಲೇಡಿಹಿಲ್ ವೃತ್ತ ಅಭಿವೃದ್ದಿ, ೫೫ ಲಕ್ಷ ವೆಚ್ಚದಲ್ಲಿ ದುರ್ಗಾಮಹಲ್ನಿಂದ ಬೊಕ್ಕಪಟ್ಣ ರಸ್ತೆ ಅಗಲೀಕರಣ ಹಾಗೂ ಪೂರಕ ಕಾಮಗಾರಿ, 250 ಲಕ್ಷ ವೆಚ್ಚದಲ್ಲಿ ಬಲ್ಮಠ ವೃತ್ತದಿಂದ ಅಪ್ಪರ್ ಬೆಂದೂರ್ ರಸ್ತೆ ಅಗಲೀಕರಣ ಮತ್ತು ಚರಂಡಿ ಪುಟ್ ಪಾತ್ ಅಬಿವೃದ್ದಿ (ತೋಟಗಾರಿಕಾ ಇಲಾಖೆ) ಮತ್ತು 25 ಲಕ್ಷ ವೆಚ್ಚದಲ್ಲಿ ಬೊಳೂರು ರಸ್ತೆಯಲ್ಲಿ ನೀರಿನ ಕೊಳವೆ ಅಳವಡಿಕೆ ಕಾರ್ಯಗಳು ಮುಖ್ಯವಾಗಿ ಒಳಗೊಂಡಿದೆ.
ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಜೆ,ಆರ್ ಲೋಬೊ ಉಪಮೇಯರ್ ರಜನೀಶ್, ಕರ್ಪೋರೇಟರ್ ಸಬಿತಾ ಮಿಸ್ಕತ್. ಮುಖ್ಯ ಸಚೇತಕ ಶಶಿಧರ್ ಹೆಗ್ದೆ ಮುಂತಾದವರು ಉಪಸ್ಥಿತರಿದ್ದರು.