ಕಾರ್ಕಳ, ಡಿ 10(DaijiworldNews/MS): ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ 101 ವರ್ಷದ ಹಿರಿಯ ಮಹಿಳೆಗೆ ಗುರುವಾರ ಆರೋಗ್ಯ ಇಲಾಖೆಯ ವತಿಯಿಂದ ಕೊವಿಡ್ ಲಸಿಕೆಯನ್ನು ನೀಡಲಾಯಿತು.
ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿರುವವರ ಮಧ್ಯೆ ಕುಕ್ಕೂಂದೂರಿನ ರತಿ ಪೂಜಾರ್ತಿ ಎಂಬವರು ಗುರುವಾರ ತಮ್ಮ 101ನೇ ವರ್ಷದ ಪ್ರಾಯದಲ್ಲಿ ಲಸಿಕೆಯನ್ನು ಪಡೆದರು.
ಉಡುಪಿ ಜಿಲ್ಲಾಡಳಿತದ ವತಿಯಿಂದ ಮನೆ ಮನೆಗೆ ಲಸಿಕೆ ಅಭಿಯಾನ ನಡೆಯುತಿದ್ದು ಈ ಸಂಧರ್ಭದಲ್ಲಿ ಶುಶ್ರೂಷಕಿಯರಾದ ಕುಮುದಾವತಿ ಮತ್ತು ಅನಿತಾ ಹಾಗೂ ಆಶಾ ಕಾರ್ಯಕರ್ತರಾದ ಸುಮಾ ಇವರು 101 ವರ್ಷದ ಹಿರಿ ಜೀವಕ್ಕೆ ಲಸಿಕೆಯನ್ನು ನೀಡಿದ್ದಾರೆ.
ರತಿ ಪೂಜಾರ್ತಿ ಇವರಿಗೆ ಕೊವ್ಯಾಕ್ಸಿನ್ ಮೊದಲ ಡೋಸ್ ಲಸಿಕೆಯನ್ನು ನೀಡಲಾಗಿದ್ದು ಅತೀವ ಸಂತೋಷದಿಂದ ಲಸಿಕೆಯನ್ನು ಸ್ವೀಕರಿಸಿದ್ದಾರೆ.
ಶತಾಯುಷಿ ಅಜ್ಜಿಯ ನಡೆಗೆ ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ