ಕುಂದಾಪುರ, ನ 27(MSP): ಕುಂದಾಪುರ ತಾಲೂಕಿನ ಅತ್ಯಂತ ಕುಗ್ರಾಮವೆಂದೇ ಗುರುತಿಸಲ್ಟಟ್ಟ ಅಮಾಸೆಬೈಲು ವಿವಿಧ ಸಾಧನೆಗಳ ಮೂಲಕ ರಾಜ್ಯದ ಗಮನ ಸಳೆಯುತ್ತಿದೆ. ಅಮಾಸಬೈಲು ಗ್ರಾಮದ ಪ್ರಧಾನ ವಿದ್ಯಾಮಂದಿರವಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇವತ್ತು ಸರ್ಕಾರ ಮತ್ತು ಸಾರ್ವಜನಿಕರ ವಿಶೇಷ ಮುತುವರ್ಜಿಯಿಂದ ಜಿಲ್ಲೆಯ ಗಮನ ಸಳೆಯುತ್ತಿದೆ. ಹಳೆ ವಿದ್ಯಾರ್ಥಿಗಳು, ಸಾರ್ವಜನಿಕರ ಅಪರೂಪದ ಸ್ಪಂದನೆಯಿಂದ ಶಾಲೆ ಪ್ರವರ್ಧಮಾನದ ಹೊಸ್ತಿಲೇರುತ್ತಿದೆ.
ಸರ್ಕಾರಿ ಶಾಲೆಗಳು ಮಕ್ಕಳ ಕೊರತೆ ಎದುರಿಸುತ್ತಿದ್ದರೆ ಇನ್ನೊಂದೆಡೆ ತೀವ್ರವಾದ ಮಕ್ಕಳ ಕೊರತೆಯಿಂದ ಶಾಲೆಗಳೆ ಮುಚ್ಚುತ್ತಿವೆ. ಆದರೆ ಅಮಾಸೆಬೈಲುವಿನ ಈ ಶಾಲೆಯನ್ನು ಖಾಸಗಿ ಶಾಲೆಯಂತೆ ಅಭಿವೃದ್ದಿ ಪಡಿಸಬೇಕು ಎಂಬ ಹಠಕ್ಕೆ ಬಿದ್ದ ಸಾರ್ವಜನಿಕರು, ಹಳೆ ವಿದ್ಯಾರ್ಥಿಗಳು, ದಾನಿಗಳು ಸರ್ಕಾರವನ್ನೇ ಕಾಯುತ್ತ ಕುಳಿತುಕೊಳ್ಳದೆ ವಿವಿಧ ಕೊಡುಗೆಗಳನ್ನು ಶಾಲೆಗೆ ನೀಡುತ್ತಾ ಬಂದರು. ಗುಣಮಟ್ಟದ ಶಿಕ್ಷಣ, ಪಾಠ ಪೂರಕವಾದ ವಾತಾವರಣ, ಸಕಲ ಮೂಲಭೂತ ವ್ಯವಸ್ಥೆಗಳಿಂದ ಶಾಲೆ ಇವತ್ತು ಮಕ್ಕಳಿಂದ ತುಂಬಿ ತುಳುಕುತ್ತಿದೆ. ಸುತ್ತಮುತ್ತ ಖಾಸಗಿ ಶಾಲೆಗಳು ಇದ್ದರೂ ಕೂಡಾ ಈ ಶಾಲೆಗೆ ವರ್ಷದಿಂದ ವರ್ಷಕ್ಕೆ ಮಕ್ಕ ಸಂಖ್ಯೆ ಹೆಚ್ಚುತ್ತಲೆ ಇದೆ. ಖಾಸಗಿ ಶಾಲೆಯಿಂದ ಕೂಡಾ ಈ ಶಾಲೆಗೆ ವಿದ್ಯಾರ್ಥಿಗಳನ್ನು ದಾಖಲಾತಿ ಪೋಷಕರು ಸ್ವ ಇಚ್ಚೆಯಿಂದ ಮಾಡುತ್ತಿದ್ದಾರೆ. ಇದಕ್ಕೆಲ್ಲಾ ಕಾರಣ ಇಲ್ಲಿನ ಶಿಕ್ಷಣ ಕ್ರಮ ಮತ್ತು ಸಾರ್ವಜನಿಕರ ಸಹಭಾಗಿತ್ವ.
ಇತ್ತೀಚೆಗೆ ಶಾಲೆಯ ವಾರ್ಷಿಕೋತ್ಸವ ಅದ್ದೂರಿಯಾಗಿ ನಡೆಯಿತು. ಈ ಸಂದರ್ಭದಲ್ಲಿ ಸುಮಾರು ೯೫ ಲಕ್ಷದ ಅಭಿವೃದ್ದಿ ಕಾರ್ಯಗಳನ್ನು ಲೋಕಾರ್ಪಣೆ ಗೊಳಿಸಲಾಯಿತು. ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ’ಶಾಲಾ ವಾರ್ಷಿಕೋತ್ಸವ ಶಾಲೆಯ ಎಲ್ಲಾ ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸಲು ಒಂದು ವೇದಿಕೆ. ಶೈಕ್ಷಣಿಕವಾಗಿ ಜಿಲ್ಲೆ ಮುಂದೆ ಬರಲು ಗ್ರಾಮಿಣಾ ಭಾಗದಲ್ಲಿ ಶಿಕ್ಷಣಾದ ವ್ಯವಸ್ಥೆ ಪೂರಕವಾಗಬೇಕು ಎಂದರು.
ಈ ಸಂದರ್ಭದಲ್ಲಿ ಅಮಾಸಬೈಲು ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷರಾದ ಎ.ಜಿ.ಕೊಡ್ಗಿ, ಉದ್ಯಮಿ ಎಮ್. ಕೃಷ್ಣಮೂರ್ತಿ ಮಂಜ, ವಾರ್ಷಿಕೋತ್ಸವ ಸಮಿತಿಯ ಅಧ್ಯಕ್ಷರಾದ ಎ.ಶಂಕರ್ ಐತಾಳ್, ನರಸಿಂಹ್ ಆಚಾರ್ರವರನ್ನು ಸನ್ಮಾನಿಸಲಾಯಿತು.
ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಾಲೆಯ ವರದಿಯನ್ನು ಶೇಖರ್ ಯು. ಮುಖ್ಯೋಪಾಧ್ಯಾಯರು ವಾಚಿಸಿದರು.
ಬಿ.ಅಪ್ಪಣ್ಣ ಹೆಗ್ಡೆ ಆಡಳಿತ ಮೊಕ್ತೇಸರರು, ಶ್ರೀ ಮಹಾಲಿಂಗೇಶ್ವರ ದೇವಾಸ್ಥಾನ ಬಸ್ರೂರು,ಗೋಪಾಲ್ ಭಟ್, ಕನ್ಸಲ್ಟಿಂಗ್ ಇಂಜಿನಿಯರ್ ಉಡುಪಿ, ಎಂ. ಸದಾರಾi ಶೆಟ್ಟಿ, ಅಧ್ಯಕ್ಷರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಕುಂದಾಪುರ ವಲಯ, ಬಳ್ಮನೆ ನರಸಿಂಹ ಮತ್ತು ಶಂಕರ ಹೆಗ್ಡೆ, ಉದ್ಯಮಿ, ಜಯರಾಮ ಶೆಟ್ಟಿ ತೊಂಭತ್ತು ಉದ್ಯಮಿ, ಸತೀಶ್ ಕಿಣಿ ಉದ್ಯಮಿ. ನರಸಿಂಹ ಶೆಟ್ಟಿ, ಅಧ್ಯಕ್ಷರು, ಎಸ್.ಡಿ.ಎಮ್.ಸಿ. ಉಪಸ್ಥಿತರಿದ್ದರು.
ರಟ್ಟಾಡಿ ನವೀನ್ಚಂದ್ರ ಶೆಟ್ಟಿ, ಸ್ವಾಗತಿಸಿ, ವಾರ್ಷಿಕೋತ್ಸವ ಸಮಿತಿಯ ಅಧ್ಯಕ್ಷರಾದ ಎ.ಶಂಕರ್ ಐತಾಳ್ ಪ್ರಾಸ್ತವಿಕ ನುಡಿಗಳನ್ನಾಡಿದರು. ಕರುಣಾಕರ ಹೆಗ್ಡೆ ವಂದಿಸಿದರು. ಎಚ್.ರತ್ನಾಕರ್ ಕಾರ್ಯಕ್ರಮವನ್ನು ನಿರೂಪಿಸಿದರು.
ಸಭಾ ಕಾರ್ಯಕ್ರಮಕ್ಕೂ ಮುನ್ನಾ ವಿವಿಧ ಮೂಲಭೂತ ಸೌಕರ್ಯಗಳ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿತು. ಸರಕಾರಿ ಶಾಲೆಯ ನೂತನ ಕಾಂಕ್ರೀಟ್ ರಸ್ತೆ ಮತ್ತು ಸುವರ್ಣದ್ವಾರವನ್ನು ಉದ್ಯಮಿ ಎಮ್. ಕೃಷ್ಣಮೂರ್ತಿ ಮಂಜ, ನವೀಕರಣಗೊಂಡ ತರಗತಿ ಕಟ್ಟಡ ಹಾಗೂ ನೂತನ ಕೊಠಡಿಗಳನ್ನು ಅಮಾಸಬೈಲು ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷರಾದ ಎ.ಜಿ.ಕೊಡ್ಗಿ, ನೂತನ ತಡೆಗೊಡೆಯನ್ನು ಬಿ.ಅಪ್ಪಣ್ಣ ಹೆಗ್ಡೆ ಆಡಳಿತ ಮೊಕ್ತೇಸರರು, ಶ್ರೀ ಮಹಾಲಿಂಗೇಶ್ವರ ದೇವಾಸ್ಥಾನ ಬಸ್ರೂರು, ನೂತನ ಸುವರ್ಣ ಸೌಧವನ್ನು ಸತೀಶ್ ಕಿಣಿ ಉದ್ಯಮಿ, ನೂತನ ಗ್ರಂಥಾಲಯವನ್ನು ಜಯರಾಮ ಶೆಟ್ಟಿ ತೊಂಭತ್ತು ಉದ್ಯಮಿ, ಪ್ರೋಜೆಕ್ಟರ್ ಮತ್ತು ಲ್ಯಾಪ್ ಟಾಪ್ ಬಳ್ಮನೆ ನರಸಿಂಹ ಮತ್ತು ಶಂಕರ ಹೆಗ್ಡೆ, ಉದ್ಯಮಿ, ವಿದ್ಯಾರ್ಥಿಗಳಿಗೆ ಕೈ ತೊಳೆಯುವ ಸ್ಥಳದಲ್ಲಿ ಮೇಲ್ಚಾವಣಿಯನ್ನು ಎಂ.ಗೋಪಾಲ್ ಭಟ್, ಪ್ರವೇಶ ದ್ವಾರ ರಟ್ಟಾಡಿ ನವೀನ್ಚಂದ್ರ ಶೆಟ್ಟಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಉದ್ಘಾಟಿಸಿದರು.