ಬೆಂಗಳೂರು, ನ 27(MSP): ಮಾಜಿ ಸಂಸದೆ ರಮ್ಯಾ ಅವರ ರಾಜಕೀಯ ಜೀವನದಲ್ಲಿ ಮಾರ್ಗದರ್ಶಕರಾಗಿದ್ದ ನಟ ಅಂಬರೀಶ್ ಅಂತಿಮ ದರ್ಶನಕ್ಕೆ ರಮ್ಯಾ ಗೈರು ಹಾಜರಾಗಿದ್ದೇಕೆ ಎನ್ನುವುದಕ್ಕೆ ಕೊನೆಗೂ ಕಾರಣ ತಿಳಿದು ಬಂದಿದೆ.
ದಿವ್ಯ ಸ್ಪಂದನ ರಮ್ಯಾ ಅವರು ಆಸ್ಟಿಯೋಕ್ಲ್ಯಾಟೋಮಾ (Osteoclastoma) ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದು, ಈ ಹಿನ್ನೆಲೆಯಲ್ಲಿ ಅಂಬರೀಶ್ ಅವರ ಅಂತಿಮ ದರ್ಶನದಲ್ಲಿ ಪಾಲ್ಗೊಂಡಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಇದು ಎರಡು ಮೂರು ಸಾವಿರ ಮಂದಿಯಲ್ಲಿ ಒಬ್ಬರಿಗೆ ಮಾತ್ರ ಕಾಣಿಸಿಕೊಳ್ಳುವ ರೋಗವಾಗಿದ್ದು, ಮೊದಲನೇ ಹಂತದಲ್ಲಿ ಚಿಕಿತ್ಸೆ ಪಡೆದರೆ ಮಾತ್ರ ಗುಣಮುಖವಾಗಬಹುದು. ಇಲ್ಲವಾದಲ್ಲಿ ಇದು ಮೂಳೆಯನ್ನು ಕೊರೆಯುತ್ತಾ ಹೋಗುವ ಗುಣಲಕ್ಷಣವನ್ನು ಆಸ್ಟಿಯೋಕ್ಲ್ಯಾಟೋಮಾ ಕಾಯಿಲೆ ಹೊಂದಿದೆ. ಇದನ್ನು ಮೂಳೆ ಕ್ಯಾನ್ಸರ್ ಕರೆಯಲಾಗುತ್ತದೆ.
ಈ ಬಗ್ಗೆ ಖುದ್ದು ರಮ್ಯಾ ಅವರೇ ತಮ್ಮ ಇನ್ ಸ್ಟಾಗ್ರಾಂನಲ್ಲಿ ಕಾಲಿನ ಚಿತ್ರ ಹಾಕಿ ನಿರ್ಲಕ್ಷ್ಯವಹಿಸಿದ್ರೆ ಬೆಲೆ ತೆರಬೇಕಾಗುತ್ತದೆ ಎಂದು ಬರೆದುಕೊಂಡಿದ್ದಾರೆ.