ಕಾಸರಗೋಡು, ನ 08 (DaijiworldNews/MS): ಕಾಞ0ಗಾಡ್ ನಗರಸಭೆಯ 30 ವಾರ್ಡ್ ಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಕಾಂಗ್ರೆಸ್ ಅಭ್ಯರ್ಥಿ ಕೆ . ಕೆ ಬಾಬು ತಮ್ಮ ಸಮೀಪದ ಪ್ರತಿಸ್ಪರ್ಧಿ ಸಿಪಿಎಂ ನ ಕೆ . ಸುಹಾಸ್ ರವರನ್ನು 116 ಮತಗಳ ಅಂತರದಿಂದ ಸೋಲಿಸಿದರು. ಬಿಜೆಪಿ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು. ಕೆ . ಕೆ. ಬಾಬು 417 ಮತ ಪಡೆದರೆ ಸುಹಾಸ್ 301 ಮತಗಳನ್ನು ಪಡೆದರು. ಬಿಜೆಪಿಯ ಟಿ . ವಿ ಪ್ರಶಾಂತ್ 248 ಮತಗಳನ್ನು ಪಡೆದರು.
ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೆ . ಪಿ ಮಧು ಕೇವಲ ಏಳು ಮತಗಳನ್ನಷ್ಟೇ ಪಡೆದರು . ಕಾಂಗ್ರೆಸ್ ಸದಸ್ಯರಾಗಿದ್ದ ಬಿನೀಶ್ ರಾಜ್ ರವರ ನಿಧನದ ಹಿನ್ನಲೆಯಲ್ಲಿ ಮಂಗಳವಾರ ಉಪ ಚುನಾವಣೆ ನಡೆದಿತ್ತು. 1,220 ಮಂದಿಯಲ್ಲಿ 985 ಮಂದಿ ಮತ ಚಲಾಯಿಸಿದ್ದರು. ಬುಧವಾರ ಬೆಳಿಗ್ಗೆ ನಗರಸಭಾ ಸಭಾಂಗಣದಲ್ಲಿ ಮತ ಎಣಿಕೆ ನಡೆಯಿತು