ಉಡುಪಿ, ನ 08 (DaijiworldNews/MS): ನ. 10ರಿಂದ ಪೂರ್ವಾನ್ವಯ ಆಗುವಂತೆ ಎಕ್ಸ್ಪ್ರೆಸ್ ಹಾಗೂ ಷಟಲ್ ಬಸ್ಗಳ ಪ್ರಯಾಣ ದರ ಪರಿಷ್ಕರಿಸಿ ಉಡುಪಿ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ಜಾರಿಗೊಳಿಸಿದೆ.
ಜಿಲ್ಲೆಯ ಎಲ್ಲ ಬಸ್ ಮಾಲೀಕರು ಪ್ರಾಧಿಕಾರ ದಿಂದ ನಿಗದಿಪಡಿಸಿರುವ ಪರಿಷ್ಕೃತ ದರವನ್ನು ಪ್ರಯಾಣಿಕರಿಂದ ಪಡೆಯಬೇಕು. ಬಸ್ಗಳಲ್ಲಿ ಸಂಚಾರ ಮಾರ್ಗದ ವಿವರವನ್ನು ಕಡ್ಡಾಯವಾಗಿ ಕನ್ನಡದಲ್ಲೇ ನಮೂದಿಸಬೇಕು ಎಂದು ಸೂಚಿಸಿದೆ.
ಕೋವಿಡ್ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು. ಬಸ್ಗಳ ಚಾಲಕರು, ನಿರ್ವಾಹಕರು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಎಂದು ಪ್ರಾಧಿಕಾರದ ಪ್ರಕಟನೆ ತಿಳಿಸಿದೆ.