ಕುಂದಾಪುರ, ನ 27(MSP): ಪತಂಜಲಿ ಚಿಕಿತ್ಸಾಲಯದ ವ್ಯವಹಾರದ ಹೆಸರಿನಲ್ಲಿ ಮಹಿಳೆಯೊಬ್ಬರಿಂದ ಆನ್ ಲೈನ್ ನಲ್ಲಿ ತಮ್ಮ ಖಾತೆಗೆ ೭,೭೫೦೦೦ ರೂ. ಜಮಾ ಮಾಡಿಸಿಕೊಂಡು ವಂಚಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಕುಂದಾಪುರ ಕೋಟೇಶ್ವರದ ಪ್ರಶಾಂತಿ ನಿಕೇತನ ನಿವಾಸಿ ಅನುರಾಧ ಹೊಳ್ಳ(39) ವಂಚಕರನ್ನು ನಂಬಿ ಹಣವನ್ನು ಕಳೆದುಕೊಡವರು. ಅನುರಾಧ ಅವರು ಪತಂಜಲಿ ಚಿಕಿತ್ಸಾಲಯದ ವ್ಯವಹಾರಕ್ಕಾಗಿ 2018 ರ ಆ.9 ರಂದು ವೆಬ್ ಸೈಟ್ ನಲ್ಲು ಆನ್ ಲೈನ್ ಮುಖೇನಾ ಪತಾಂಜಲಿ ಚಿಕಿತ್ಸಾಲಯಕ್ಕೆ ದಾಖಲಾತಿ ನೋಂದಾಣಿ ಮಾಡಿಕೊಂಡಿದ್ದರು.2 ದಿನಗಳ ಬಳಿಕ ಕರೆ ಮಾಡಿ ವ್ಯವಹಾರದ ಮುಂದಿನ ಹಂತಕ್ಕೆ ಆಧಾರ್ , ಪಾನ್ ಕಾರ್ಡ್, ಚುನಾವಣಾ ಗುರುತಿನ ಚೀಟಿ , ಭಾವಚಿತ್ರ ವಾಟ್ಸಾಪ್ ಮಾಡುವಂತೆ ವಂಚಕರು ಸೂಚಿಸಿದ್ದರು.
ಇದಾದ ಬಳಿಕ ಆ.13 ರಂದು ವ್ಯವಹಾರದ ನೋಂದಣಿಗಾಗಿ 50,000 ರೂ. ಖಾತೆಗೆ ಪಾವತಿಸುವಂತೆ ಸೂಚಿಸಿದ್ದು ಆ. 23 ರಂದು ಜಮಾ ಮಾಡಲಾಗಿತ್ತು. ಆ ಬಳಿಕ ವಂಚಕರು ತಿಳಿಸಿದಂತೆ ಸೆಕ್ಯೂರಿಟಿ ಡೆಪಾಸಿಟ್ ಗಾಗಿ, ಆಯುರ್ವೇದ ಸಾಮಾನು ಖರೀದಿಗಾಗಿ, ಯೋಗ ತರಬೇತಿಗಾಗಿ, ಹಾಗೂ ವ್ಯಾಟ್ ತೆರಿಗೆ ಮೊತ್ತ ಎಂದು ಹಂತ ಹಂತವಾಗಿ ಅನುರಾಧ ಅವರು ಹಣ ಪಾವತಿಸಿದ್ದರು. ಇದಾದ ಬಳಿಕ ಅ.30 ರಂದು ಕರೆ ಮಾಡಿ ಸಾಮಾನು ಲಾರಿಯನ್ನು ತೆರಿಗೆ ಅಧಿಕಾರಿಗಳು ಹಿಡಿದು ದಂದ ವಿಧಿಸಿದ್ದಾಗಿ ತಿಳಿಸಿದ್ದು ಮತ್ತೆ 55,000 ಪಾವತಿಸುವಂತೆ ತಿಳಿಸಿದ್ದರು ಇದನ್ನು ನಂಬಿದ ಅವರು ಮತ್ತೆ ಹಣ ಖಾತೆಗೆ ಜಮಾ ಮಾಡಿದ್ದರು.
ಇಷ್ಟೆಲ್ಲಾ ಹಣ ಪಡೆದ ಬಳಿಕ ಯಾವುದೇ ಸುದ್ದಿ ಇಲ್ಲದೇ ಇರುವುದರಿಂದ ಅನುಮಾನಗೊಂಡಿರುವ ಅನುರಾಧ ಹೊಳ್ಳ ಕರೆ ಮಾಡಿದಾಗ ಎಲ್ಲಾ ನಂಬರ್ ಸ್ತಬ್ದಗೊಂಡಿದೆ. ಈ ವ್ಯವಹಾರಕ್ಕಾಗಿ ಒಟ್ಟು 7,75000 ರೂ. ಕಳೆದುಕೊಂಡಿದ್ದಾರೆ. ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.