ಮಂಗಳೂರು, ನ 27(MSP): ನಗರದ ಕದ್ರಿ ಪಾರ್ಕ್ ನಲ್ಲಿ ಸೋಮವಾರ ಸಂಜೆ ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಇಬ್ಬರ ಆರೋಗ್ಯ ಸ್ಥಿತಿಯೂ ಗಂಭೀರವಾಗಿದೆ.
ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಲ್ಯಾಬ್ ಟೆಕ್ನಿಷಿಯನ್ ವೃತ್ತಿಯಲ್ಲಿದ್ದ ಕಾಸರಗೋಡು ಜಿಲ್ಲೆಯ ಹರ್ಷಿತ್ ಕುಮಾರ್(23) ಮತ್ತು ಅದೇ ಆಸ್ಪತ್ರೆ ಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಹುದ್ದೆಯ ಇಂಟರ್ನ್ ಶಿಪ್ ಮಾಡುತ್ತಿದ್ದ ಅಮೃತಾ(18) ಆತ್ಮಹತ್ಯೆಗೆ ಯತ್ನಿಸಿದವರು.
ಇಬ್ಬರೂ ಪ್ರೀತಿಸುತ್ತಿದ್ದರು. ಸೋಮ ವಾರ ಸಂಜೆ ಜೊತೆಯಾಗಿ ಉದ್ಯಾನಕ್ಕೆ ಬಂದಿದ್ದು, ಕೆಲಕಾಲ ಸುತ್ತಾಡಿದ್ದಾರೆ. ಒಟ್ಟಿಗೆ ಸಾಯುವ ಉದ್ದೇಶದಿಂದ ಉದ್ಯಾನದ ಮೂಲೆಯೊಂದರಲ್ಲಿ ವಿಷ ಸೇವಿಸಿದ್ದರು. ಕೆಲ ಹೊತ್ತಿನ ಬಳಿಕ ಅಲ್ಲಿದ್ದವರಿಗೆ ವಾಕಿಂಗ್ ಮಾಡುತ್ತಿದ್ದವರಿಗೆ ಒಬ್ಬರಮೇಲೊಬ್ಬರ ಓರಗಿದ ಸ್ಥಿತಿಯಲ್ಲಿದ್ದ ಇವರನ್ನು ಕಂಡು ಸಂಶಯಬಂದಿದೆ.ಬಳಿಕ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವಕ ಮತ್ತು ಯುವತಿಯನ್ನು ತೀವ್ರ ನಿಗಾ ಘಟಕ ದಲ್ಲಿ ಇರಿಸಿದ್ದು, ಇಬ್ಬರ ಸ್ಥಿತಿಯೂ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರೀತಿಸುತ್ತಿರುವುದಕ್ಕೆ ಕುಟುಂಬದ ವರು ವಿರೋಧ ವ್ಯಕ್ತಪಡಿಸಿದ್ದರಿಂದ ಬೇಸತ್ತು ಇಬ್ಬರೂ ಆತ್ಮಹತ್ಯೆಗೆ ಯತ್ನಿಸಿ ದ್ದಾರೆ ಎಂಬ ಮಾಹಿತಿ ಪ್ರಾಥಮಿಕ ಹಂತದಲ್ಲಿ ಪೊಲೀಸರಿಗೆ ಲಭ್ಯವಾಗಿದೆ. ಇಬ್ಬರ ಕುಟುಂಬದವರಿಗೂ ಮಾಹಿತಿ ರವಾನಿಸಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.